ರಾಹುಲ್ ಟ್ವೀಟ್​ಗೆ ಜಯಂತ್ ಸಿನ್ಹಾ ಸವಾಲ್​

ನವದೆಹಲಿ: ರಾಮಘರ್​ ಹಿಂಸಾಚಾರದ ಆರೋಪಿಗಳಿಗೆ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಸನ್ಮಾನದ ವಿಚಾರ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಿನ್ಹಾ ನಡುವಿನ ಹೈವೋಲ್ಟೇಜ್‌ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಚಾರ ಸಂಬಂಧ ಖುದ್ದು ನೇರ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿಗೆ ಟ್ವೀಟರ್‌ನಲ್ಲಿ ಸವಾಲು ಹಾಕಿದ್ದಾರೆ. ಈ ಬಗ್ಗೆ ಮೌನ ಮುರಿದಿರುವ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್‌ ಸಿನ್ಹಾ, ರಾಹುಲ್ ಗಾಂಧಿ ಅಸಹ್ಯ ಹೇಳಿಕೆಯನ್ನ ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ. ನನ್ನ ಶಿಕ್ಷಣ, ಮೌಲ್ಯಗಳು ಹಾಗೂ ಮಾನವೀಯತೆ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಹೀಗಾಗಿ ಈ ವಿಚಾರ ಸಂಬಂಧ ಇಂಗ್ಲಿಷ್‌ ಅಥವಾ ಹಿಂದಿಯ ಭಾಷೆಯ ಲೈವ್‌ ಡಿಬೆಟ್‌ಗೆ ಬರುವಂತೆ ಸವಾಲು ಹಾಕಿದ್ದಾರೆ.