ನೋಟಿಸ್​ ನೀಡಿದ ಇನ್ಸ್​ಪೆಕ್ಟರ್​ಗೆ ಪೇದೆಯ ಖಡಕ್​ ಉತ್ತರ..ಏನು ಗೊತ್ತಾ..!?

ಬೆಂಗಳೂರು: ಜಯನಗರ ಠಾಣೆಯ ಪೇದೆಯೊಬ್ಬರು ಠಾಣಾ ಇನ್ಸ್​ಪೆಕ್ಟರ್​ಗೇ ಖಡಕ್​ ಉತ್ತರ ಕೊಟ್ಟಿದ್ದಾರೆ. ಠಾಣೆಗೆ ತಡವಾಗಿ ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ  ಠಾಣೆಯ ಇನ್ಸ್​ಪೆಕ್ಟರ್, ಪೇದೆ ಶ್ರೀಧರ್ ಗೌಡಗೆ ನೋಟಿಸ್ ನೀಡಿದ್ದರು. ಇದಕ್ಕೆ ಖಡಕ್​ ಆಗೇ ಪೇದೆ ಶ್ರೀಧರ್​ ಗೌಡ ಉತ್ತರ ನೀಡಿದ್ದಾರೆ. ‘ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯೂಡಿ ಹೊಟೇಲ್​ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್​ನಲ್ಲಿ ಡಿನ್ನರ್, ಮಿಲನೋದಯದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30 ಕ್ಕೆ ಅಲ್ಲಾ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ, ಆದರೆ ನನಗೆ ವಯಸ್ಸಾದ ತಂದೆ- ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ’. ‘ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಖಡಕ್​ ಹಾಗೇ ಉತ್ತರಿಸಿದ್ದಾರೆ. ಪ್ರತಿದಿನ ಬೀಟ್ ಸಿಬ್ಬಂದಿ ತಡವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ನೊಟೀಸ್ ನೀಡಿಲಾಗಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv