ಜಯನಗರ ಚುನಾವಣೆ ಹಿನ್ನಲೆ: ಚುನಾವಣಾ ಆಯುಕ್ತರಿಂದ ಸುದ್ದಿಗೋಷ್ಠಿ

ಬೆಂಗಳೂರು: ಇದೇ ತಿಂಗಳ 11 ರಂದು ಜಯನಗರ ಚುನಾವಣಾ ಮತದಾನ ನಡೆಯುತ್ತೆ, ಇದರ ಕೌಂಟಿಂಗ್ 13ರಂದು ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆಯಲಿದೆ. ಇದರಲ್ಲಿ 7 ವಾರ್ಡ್‌ಗಳಿದ್ದು, 216 ಮತಗಟ್ಟೆ ಸ್ಥಾಪನೆಯಾಗಲಿದೆ ಅಂತಾ ನಗರ ಚುನಾವಣಾ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.

ಆಯುಕ್ತ ಮಹೇಶ್ವರ್ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.  ಮತಗಟ್ಟೆಗಳಲ್ಲಿ 5 ಸಖಿ ಪಿಂಕ್ ಬೂತ್, 1 ಮಾದರಿ ಮತಗಟ್ಟೆ ಇರಲಿದ್ದು, ಜಯನಗರ ಜನಸಂಖ್ಯೆ 3,12,252 ಇದೆ. ಜಯನಗರ ಕ್ಷೇತ್ರದಲ್ಲಿ ಒಟ್ಟು 2,03,184 ಮತದಾರರಿದ್ದು, 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 9 ಸ್ವತಂತ್ರ ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸುತ್ತಿದ್ದಾರೆ. 332 ಪೋಲೀಸರು 216 ಮತಗಟ್ಟೆಗಳಿಗೆ ಭದ್ರತೆ ಒದಗಿಸಲಾಗುವುದು. ಇನ್ನು 16 ಸೆಕ್ಟರ್ ಮೊಬೈಲ್‌ಗಳನ್ನು  ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಮತಗಟ್ಟೆಯಲ್ಲಿ ಸಮಸ್ಯೆಯಾದರೆ 5-10 ನಿಮಿಷದೊಳಗೆ ಈ ತಂಡ ಸ್ಥಳಕ್ಕೆ ತಲುಪುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಹಾಗೇ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗ್ಲೇ ಒಟ್ಟು 30.82 ಲಕ್ಷ ಜಪ್ತಿ ಮಾಡಲಾಗಿದೆ. ಒಟ್ಟು 14 ಎಫ್‌ಐಆರ್‌ಗಳು ದಾಖಲಾಗಿವೆ. ಇಂದು 1 ಎನ್‌ಸಿಆರ್ ರೂ 4.80 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಅಂತಾ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ತಿಳಿಸಿದ್ರು.

ನಗರ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಇಂದಿನಿಂದ 48 ಗಂಟೆಗಳ ಕಾಲ ಕ್ಷೇತ್ರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾನೂನುಬಾಹಿರವಾಗಿ ಗುಂಪುಗಾರಿಕೆ, ಸಾರ್ವಜನಿಕ ಸಭೆಗೆ ನಿಷೇಧ ಹೇರಲಾಗಿದೆ. ಮೆರವಣಿಗೆ, ಸಭೆಗಳನ್ನ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ಕೂಡಾ ನೀಡಲಾಗಿದ್ದು, ಶಸ್ತ್ರಾಸ್ರ್ತ ಮಾರಾಕಾಸ್ತ್ರಗಳನ್ನ ಕೊಂಡೊಯ್ಯುವಂತಿಲ್ಲ ಹಾಗೂ ಬ್ಯಾನರ್ ಹಾಗೂ ಪ್ಲೆಕ್ಸ್ ಗಳನ್ನ ಹಾಕದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv