ಜಯನಗರ ಚುನಾವಣಾ ಫಲಿತಾಂಶ #LiveUpdates

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ, ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಬಾಬು ವಿರುದ್ಧ ಸೌಮ್ಯಾ ರೆಡ್ಡಿ ಜಯ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯ ಭದ್ರಕೋಟೆಯನ್ನ ಈಗ ಕಾಂಗ್ರೆಸ್​​ ವಶಪಡಿಸಿಕೊಂಡಿದೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿ ಕೃಷ್ಣಾ ರೆಡ್ಡಿ ಅವರಿಗೆ 1,591 ಮತಗಳು ಸಿಕ್ಕಿವೆ.

ಬೆಳಗ್ಗೆ 11.40: ಕಾಂಗ್ರೆಸ್​​ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಗೆಲುವು. 16ನೇ ಸುತ್ತಿನಲ್ಲಿ ಕಾಂಗ್ರೆಸ್​ಗೆ 54,055 ಮತಗಳು, ಬಿಜೆಪಿಗೆ 50,270 ಮತಗಳು, ರವಿ ಕೃಷ್ಣಾ ರೆಡ್ಡಿಗೆ 1,591 ಮತಗಳು

ಬೆಳಗ್ಗೆ 11: 25: 15ನೇ ಸುತ್ತಿನಲ್ಲಿ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿಗೆ 4849 ಮತಗಳ ಮುನ್ನಡೆ. ಕಾಂಗ್ರೆಸ್​​ಗೆ 51,347 ಮತಗಳು, ಬಿಜೆಪಿಗೆ 44,785 ಮತಗಳು

 ಬೆಳಗ್ಗೆ 11.10: 14ನೇ ಸುತ್ತಿನಲ್ಲಿ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿಗೆ 6,900 ಮತಗಳ ಮುನ್ನಡೆ. ಕಾಂಗ್ರೆಸ್​​ಗೆ 51,192 ಮತಗಳು, ಬಿಜೆಪಿಗೆ 44,292 ಮತಗಳು ಇನ್ನೆರಡು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ. ಸೌಮ್ಯಾ ರೆಡ್ಡಿ ಗೆಲುವು ಬಹುತೇಕ ಖಚಿತ 

ಬೆಳಗ್ಗೆ 11.00: 13ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್​ ಅಭ್ಯರ್ಥಿಗೆ 48,584 ಮತಗಳು, ಬಿಜೆಪಿ ಅಭ್ಯರ್ಥಿಗೆ 39,970 ಮತಗಳು. ಕಾಂಗ್ರೆಸ್​​ಗೆ 8614 ಮತಗಳ ಮುನ್ನಡೆ.

ಬೆಳಗ್ಗೆ 10.55: 12 ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿಗೆ 45,975 ಮತಗಳು, ಬಿಜೆಪಿಯ ಪ್ರಹ್ಲಾದ್​ ಬಾಬುಗೆ 35,798 ಮತಗಳು. ಕಾಂಗ್ರೆಸ್​​ಗೆ 10,177 ಮತಗಳ ಮುನ್ನಡೆ.

ಬೆಳಗ್ಗೆ 10.42: 11ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿಗೆ 43,476 ಮತಗಳು, ಬಿಜೆಪಿಯ ಪ್ರಹ್ಲಾದ್​ ಬಾಬುಗೆ 30,695 ಮತಗಳು, ರವಿಕೃಷ್ಣಾ ರೆಡ್ಡಿಗೆ 1,132 ಮತಗಳು, ಕಾಂಗ್ರೆಸ್​​ಗೆ 12,178 ಮತಗಳ ಮುನ್ನಡೆ.

ಬೆಳಗ್ಗೆ 10.37: ಮತ ಎಣಿಕೆ ಕೇಂದ್ರದಿಂದ ಹೊರನಡೆದ ಪ್ರಹ್ಲಾದ್​ ಬಾಬು

ಬೆಳಗ್ಗೆ 10.35: 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಸೌಮ್ಯಾ ರೆಡ್ಡಿಗೆ ಮತಗಳ ಮುನ್ನಡೆ. ಕಾಂಗ್ರೆಸ್​​ಗೆ 40,677 ಮತಗಳು, ಬಿಜೆಪಿಗೆ  25738 ಮತಗಳು, ರವಿಕೃಷ್ಣಾ ರೆಡ್ಡಿಗೆ 950 ಮತಗಳು

ಬೆಳಗ್ಗೆ 10.25: 9ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಸೌಮ್ಯಾ ರೆಡ್ಡಿಗೆ 15,345 ಮತಗಳ ಮುನ್ನಡೆ. ಕಾಂಗ್ರೆಸ್​​ಗೆ 37,288 ಮತಗಳು, ಬಿಜೆಪಿಗೆ 21,943 ಮತಗಳು, ರವಿಕೃಷ್ಣಾ ರೆಡ್ಡಿಗೆ 843 ಮತಗಳು.

ಬೆಳಗ್ಗೆ 10.16: 8ನೇ ಸುತ್ತಿನಲ್ಲೂ ಸೌಮ್ಯಾ ರಾಮಲಿಂಗಾರೆಡ್ಡಿಗೆ ಮುನ್ನಡೆ. ಕಾಂಗ್ರೆಸ್​​ಗೆ  31,642 ಮತಗಳು, ಬಿಜೆಪಿಗೆ 21,386 ಮತಗಳು, ರವಿಕೃಷ್ಣಾ ರೆಡ್ಡಿಗೆ 809 ಮತಗಳು, ನೋಟಾ 361 ಮತಗಳು,  ಕಾಂಗ್ರೆಸ್​​ಗೆ 10,256 ಮತಗಳ ಮುನ್ನಡೆ.

ಬೆಳಗ್ಗೆ 10.03: 7ನೇ ಸುತ್ತಿನ ಮತ ಎಣಿಕೆಯಲ್ಲೂ ಕಾಂಗ್ರೆಸ್​ನ ಸೌಮ್ಯಾ ರೆಡ್ಡಿಗೆ ಮುನ್ನಡೆ, ಕಾಂಗ್ರೆಸ್​ನ ಸೌಮ್ಯಾ ರೆಡ್ಡಿಗೆ 27,195 ಮತಗಳು, ಬಿಜೆಪಿಯ ಪ್ರಹ್ಲಾದ್​ ಬಾಬುಗೆ 19,822 ಮತಗಳು, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಗೆ 735 ಮತಗಳು

ಬೆಳಗ್ಗೆ 9.52: 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ, ಕಾಂಗ್ರೆಸ್​ನ ಸೌಮ್ಯಾ ರೆಡ್ಡಿಗೆ ಮುನ್ನಡೆ, ಕಾಂಗ್ರೆಸ್​ಗೆ 22,356 ಮತಗಳು, ಬಿಜೆಪಿಗೆ 18,763 ಮತಗಳು, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಗೆ 645 ಮತಗಳು.

ಬೆಳಗ್ಗೆ 9.45: ಐದನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯಾ ರೆಡ್ಡಿ. ಕಾಂಗ್ರೆಸ್​​ಗೆ 17,923, ಬಿಜೆಪಿಗೆ 16,331 , ರವಿ ಕೃಷ್ಣಾ ರೆಡ್ಡಿಗೆ 645 ಮತಗಳು

ಬೆಳಗ್ಗೆ 9.25: ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿಗೆ 5348 ಮತಗಳ ಮುನ್ನಡೆ. ಕಾಂಗ್ರೆಸ್​​ಗೆ 16,438 ಮತಗಳು, ಬಿಜೆಪಿಗೆ 11,090 ಮತಗಳು, ರವಿಕೃಷ್ಣಾ ರೆಡ್ಡಿಗೆ 281 ಮತಗಳು

ಬೆಳಗ್ಗೆ 9.15: ಎರಡನೇ ಸುತ್ತಿನ ಮತೆಣಿಗೆ ಮುಕ್ತಾಯ. ಕಾಂಗ್ರೆಸ್​​ಗೆ 6719 ಮತಗಳು, ಬಿಜೆಪಿಗೆ 6453 ಮತಗಳು, ರವಿಕೃಷ್ಣ ರೆಡ್ಡಿಗೆ 281 ಮತಗಳು, ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್​​ನ ಸೌಮ್ಯಾ ರೆಡ್ಡಿ 266 ಮತಗಳ ಮುನ್ನಡೆ

ಬೆಳಗ್ಗೆ 9.00: ಮೊದಲ ಸುತ್ತಿನ ಮತಣಿಕೆ ಮುಕ್ತಾಯ, ಪ್ರಹ್ಲಾದ್​ ಬಾಬುಗೆ 3,322 ಮತಗಳು, ​​ ಸೌಮ್ಯಾ ರೆಡ್ಡಿಗೆ 3749 ಮತಗಳು, ಪಕ್ಷೇತರ ಅಭ್ಯರ್ಥಿ ರವಿಕೃಷ್ಣ ರೆಡ್ಡಿಗೆ 151 ಮತಗಳು, ನೋಟಾ 64 ಮತಗಳು. ಮೊದಲ ಸುತ್ತಿನಲ್ಲಿ ಸೌಮ್ಯಾ ರೆಡ್ಡಿಗೆ 427 ಮತಗಳ ಮುನ್ನಡೆ

ಬೆಳಗ್ಗೆ 8.34: 14 ಟೇಬಲ್​ಗಳಲ್ಲಿ 16 ಸುತ್ತು ಮತ ಎಣಿಕೆ

ಬೆಳಗ್ಗೆ 8.28: ಇವಿಎಂ ಮತ ಎಣಿಕೆ ಆರಂಭ

ಬೆಳಗ್ಗೆ 8.16: ಅಂಚೆ ಮತಗಳಲ್ಲಿ 3 ಮತಗಳನ್ನ ಪಡೆದ ಬಿಜೆಪಿಗೆ ಆರಂಭಿಕ ಮುನ್ನಡೆ

ಬೆಳಗ್ಗೆ 8.15: ಅಂಚೆ ಮತಗಳಲ್ಲಿ ಬಿಜೆಪಿಗೆ 3, ಕಾಂಗ್ರೆಸ್​​ಗೆ 1 ಮತ

ಬೆಳಗ್ಗೆ 8.04: ಅಂಚೆ ಮತಗಳ ಎಣಿಕೆ ಮುಕ್ತಾಯ

ಬೆಳಗ್ಗೆ 8.02: ಕೇವಲ 4 ಅಂಚೆ ಮತಗಳ ಚಲಾವಣೆ

ಬೆಳಗ್ಗೆ 8.00: ಅಂಚೆ ಮತಗಳ ಎಣಿಕೆ ಆರಂಭ

ಬೆಳಗ್ಗೆ 7.45: ಸ್ಟ್ರಾಂಗ್​ ರೂಮ್​​ ಓಪನ್​ ಮಾಡಿದ ಚುನಾವಣಾಧಿಕಾರಿಗಳು

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv