ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆಗೆ ‘ಗಿರಿಕನ್ಯೆ’ ಜಯಮಾಲಾ ಟಾಂಗ್

ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆಗೆ ಜಯಮಾಲಾ ಟಾಂಗ್​ ಕೊಟ್ಟಿದ್ದಾರೆ. ಜಗತ್ತಿನಲ್ಲಿ ಎಲ್ಲದಕ್ಕೂ ಔಷಧವಿದೆ. ಆದ್ರೆ ಹೊಟ್ಟೆಕಿಚ್ಚಿಗೆ ಔಷಧ ಇಲ್ಲ. ವಿಧಾನ ಪರಿಷತ್ ಸಭಾನಾಯಕಿಯಾಗಿ ಕೆಲಸ ಮಾಡುವ ಶಕ್ತಿ ನನಗಿದೆ ಎಂದು ಸಚಿವೆ ಜಯಮಾಲ ಹೇಳಿದ್ದಾರೆ.

ಜಯಮಾಲಾ ಸೇವೆ ರಾಜ್ಯ ನಾಯಕರಿಗೆ ಇಷ್ಟವಾಗಿದೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಜಯಮಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪದ ಪ್ರಯೋಗ ನನಗೆ ಸರಿ ಎನಿಸಲಿಲ್ಲ, ಇದು ರಾಹುಲ್ ಗಾಂಧಿ ಅವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ, ಸಂವಿಧಾನ ಇಲ್ಲದೇ ಇದ್ದಿದ್ರೆ, ಪುರುಷರೇ ಸಮಾಜವನ್ನ ಆಳುತ್ತಿದ್ದರು. ನಮ್ಮನ್ನ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುತ್ತಿದ್ದರು. ಕಾಂಗ್ರೆಸ್‌ಗೆ ಧ್ವನಿ ಪೆಟ್ಟಿಗೆ ಆಗಿದ್ದವರು ಹೆಣ್ಣು. ಇಂದಿರಾ ಗಾಂಧಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಹೆಣ್ಣು. ಇವರು ಪಕ್ಷಕ್ಕೆ ಮರುಚೇತನ ನೀಡಿದ್ದಾರೆ ಎಂದು ಕೆ.ಕೆ ಗೆಸ್ಟ್ ಹೌಸ್ ನಲ್ಲಿ ಜಯಮಾಲಾ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv