‘ಶ್ರೀಗಳ ದಿನಚರಿ ಅದ್ಭುತವಾಗಿದೆ, ಅವರ ಹೃದಯ ಬಡಿತ ಚೆನ್ನಾಗಿದೆ’

ತುಮಕೂರು: ‘ಸಿದ್ದಗಂಗಾ ಶ್ರೀಗಳಿಗೆ ಇನ್ನೂ 8 ರಿಂದ 10 ದಿನಗಳ ಕಾಲ ಕೃತಕ ಉಸಿರಾಟವನ್ನ ಮುಂದುವರೆಸಬಹುದು’ ಅಂತಾ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಹೇಳಿದ್ದಾರೆ.

ಇಂದು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿದ ಡಾ.ಮಂಜುನಾಥ್ ನೇತೃತ್ವದ ಟೀಂ, ಡಾ.ಶಿವಕುಮಾರ್ ಸ್ವಾಮೀಜಿಗಳ ಆರೋಗ್ಯ ತಪಾಸಣೆ ನಡೆಸಿತು. ಬಳಿಕ ಫಸ್ಟ್​ ನ್ಯೂಸ್​​ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ ಅವರು, ಶ್ರೀಗಳು ಆರು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾರೆ. ಅವರಿಗೆ ಟ್ರೈಕಿಯಾಸ್ಟಮಿ ಚಿಕಿತ್ಸೆಯ ಅಗತ್ಯತೆ ಇಲ್ಲ. ಅದಕ್ಕೆ ಪರ್ಯಾಯವಾಗಿ ನಾವು ಬೇರೆ ಸಲಹೆಯನ್ನ ನೀಡಿದ್ದೇವೆ ಅಂತಾ ಹೇಳಿದರು.

ಶ್ರೀಗಳ ದಿನಚರಿ ಅದ್ಭುತವಾಗಿದೆ. ಶಿಸ್ತುಬದ್ಧವಾದ ಆಹಾರ ಪದ್ಧತಿಯಿಂದ ಅವರ ಹೃದಯ ಬಡಿತ ಚೆನ್ನಾಗಿದೆ. ಇನ್ನೂ ಎಂಟರಿಂದ ಹತ್ತು ದಿನಗಳ ಕಾಲ ವೆಂಟಿಲೇಟರ್​​ನಲ್ಲಿಟ್ಟು ಚಿಕಿತ್ಸೆ ನೀಡಬಹುದು. ಸೀನಿಯರ್ ಪ್ರೊಫೆಸರ್ ಕಾರ್ಡಿಯಾಲಜಿಸ್ಟ್​ ಡಾ.ರವೀಂದ್ರನಾಥ್, ರಾಜೀವ್ ಗಾಂಧಿ ಇನ್​​ಸ್ಟಿಟ್ಯೂಟ್​ ಆಫ್ ಚೆಸ್ಟ್ ಡೀಸಿಜ್ ನಿರ್ದೇಶಕ ಮತ್ತು ಲಂಗ್ಸ್ ಸ್ಪೆಷಲಿಸ್ಟ್ ಡಾ‌.ನಾಗರಾಜ್, ಜಯದೇವ ಆಸ್ಪತ್ರೆಯ ಅನಸ್ತೇಷಿಯಾ ತಜ್ಞ ಡಾ.ಎನ್.ಮಂಜುನಾಥ್,  ಕಿದ್ವಾಯಿ ಸೀನಿಯರ್ ಸರ್ಜನ್ ಡಾ.ರವಿತೇಜ್ ಸೇರಿ ಐವರು ನುರಿತ ವೈದ್ಯರ ತಂಡದಿಂದ ತಪಾಸಣೆ ಮಾಡಿದ್ದೇವೆ ಎಂದರು.

ಸಿದ್ದಗಂಗಾ ಆಸ್ಪತ್ರೆ ವೈದ್ಯರ ಚಿಕಿತ್ಸೆಯ ಕ್ರಮಬದ್ಧವಾಗಿದೆ. ಮೈನರ್ ಆಲ್ಟ್ರೇಷನ್ ಅಷ್ಟೇ ಹೊರತು ಬೇರೆ ಯಾವ ಚಿಕಿತ್ಸೆ ಇಲ್ಲ. ಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಶ್ವದರ್ಜೆ ಚಿಕಿತ್ಸೆ ಸೌಲಭ್ಯವಿದೆ. ಶ್ರೀಗಳಿಗೆ ಸ್ವಲ್ಪ ಉಸಿರಾಟದ ಸಮಸ್ಯೆ ಇದೆ. ವೆಂಟಿಲೇಟರ್ ಮುಂದುವರೆಸುವಂತೆ ಹೇಳಿದ್ದೇವೆ. ನಾನು ಮೂರು ವರ್ಷಗಳ ಹಿಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಶ್ರೀಗಳನ್ನ ಭೇಟಿ ಮಾಡಿದ್ದೆ ಅಂತಾ ಹೇಳಿದರು.