ನಿಷೇಧದ ನಡುವೆಯೂ ಜಾತ್ರೆಯಲ್ಲಿ ಮೌಢ್ಯಾಚರಣೆ..!

ಚಾಮರಾಜನಗರ: ಮೌಢ್ಯಾಚರಣೆ ನಿಷೇಧದ ನಡುವೆಯೂ ಇದು ನಮ್ಮ ನಂಬಿಕೆ ಅಂತ ಜನ ಮೌಢ್ಯವನ್ನ ಮೆರೆಯೋದನ್ನ ಬಿಟ್ಟಿಲ್ಲ. ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯಲ್ಲಿ ಮೌಢ್ಯದ ಪರಕಾಷ್ಠೆಯ ದರ್ಶನವಾಯ್ತು. ಜಾತ್ರೆಯಲ್ಲಿ ಬಾಯಿಗೆ ಸರಳು ಚುಚ್ಚಿಸಿಕೊಂಡು ಬಾಯಿ ಬೀಗ ಹಾಕಿ ಮೆರವಣಿಗೆ ಮಾಡುವ ಪದ್ದತಿ ಈಗಲೂ ಜಾರಿಯಲ್ಲಿದೆ. ಇವತ್ತು ನಡೆದ ಜಾತ್ರೆಯಲ್ಲಿ ನೂರಾರು ಮಹಿಳೆಯರು 20 ಅಡಿ ಉದ್ದದ ಸರಳನ್ನ ಬಾಯಿಗೆ ಚುಚ್ಚಿಸಿಕೊಂಡು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆ ನಡೆಸಿದ್ರು. ಬೆಟ್ಟಳ್ಳಿ ಮಾರಮ್ಮನಿಗೆ ಹೊತ್ತ ಹರಕೆ ತೀರಿಸಲು ಈ ಆಚರಣೆಯನ್ನ ಮಾಡಲಾಗುತ್ತಂತೆ. ಪೊಲೀಸರ ಸಮ್ಮುಖದಲ್ಲೇ ಮೌಢ್ಯಾಚರಣೆ ನಡೆದರೂ ಯಾರೂ ಇದನ್ನ ಪ್ರಶ್ನಿಸಿಲ್ಲ. ಇತ್ತ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಅದಕ್ಕೂ ಜನ ಕ್ಯಾರೆ ಅನ್ನದೆ ತಮ್ಮ ಆಚರಣೆಯನ್ನ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *