19 ಹಲ್ಲಿಗಳನ್ನ ಕದ್ದು ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್..!

ಮೆಲ್​ಬೋರ್ನ್: ಜಗತ್ತಿನಲ್ಲಿ ಯಾವ ಪ್ರಾಣಿಯ ಬೆಲೆ ಎಷ್ಟು ಅನ್ನೋದು ಸುಲಭವಾಗಿ ಅಂದಾಜಿಸೋಕೆ ಸಾಧ್ಯವೇ ಇಲ್ಲವೇನೋ? ಹಾವು, ಆನೆ, ಹುಲಿ, ಚಿರತೆ, ಹೀಗೆ ಒಂದೊಂದು ಪ್ರಾಣಿಗೆ ಒಂದೊಂದು ಬೆಲೆ ಇದೆ. ಇನ್ನು ಅವನತಿಯತ್ತ ಸಾಗುತ್ತಿರುವ ಪ್ರಾಣಿಗಳಿಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಈ ಲಿಸ್ಟ್​​ನಲ್ಲಿ ಹಲ್ಲಿಗಳೂ ಇವೆ ಅಂದ್ರೆ ನಂಬಲೇ ಬೇಕು.

ಜಗತ್ತಿನ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ನಂಬಿಕೆಗಳು ಇವೆ. ಅದೇ ರೀತಿ ಹಲ್ಲಿಗಳ ಬಗ್ಗೆಯೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯ ನಂಬಿಕೆ ಇದೆ. ಅದ್ಯಾವ ನಂಬಿಕೆ ಇಟ್ಟುಕೊಂಡು ಜಪಾನ್​ನ ಮಹಿಳೆ ಹಲ್ಲಿಗಳನ್ನ ಕದ್ದು ಸಾಗಿಸೋಕೆ ಮುಂದಾಗಿದ್ದಳೋ ಗೊತ್ತಿಲ್ಲ. ಸದ್ಯ ಹಲ್ಲಿಗಳನ್ನ ಕದ್ದು ಸಾಗಿಸುತ್ತಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾ ಪೊಲೀಸರ ಅತಿಥಿಯಾಗಿದ್ದಾಳೆ.

27 ವರ್ಷದ ಜಪಾನ್ ಮೂಲದ ಮಹಿಳೆ ತನ್ನ ಸೂಟ್​ಕೇಸ್​ನಲ್ಲಿ 19 ಹಲ್ಲಿಗಳನ್ನ ಸಾಗಿಸುತ್ತಿದ್ದ ವೇಳೆ ಮೆಲ್​ಬೋರ್ನ್ ಏರ್​ಪೋರ್ಟ್​​ನಲ್ಲಿ ಬಂಧಿಸಲಾಗಿದೆ. 17 ಶಿಂಗಲ್​​ಬ್ಯಾಕ್ ಲಿಸರ್ಡ್ ಮತ್ತು 2 ನೀಲಿ ನಾಲಗೆಯ ಹಲ್ಲಿಗಳನ್ನ ಆಕೆ ತನ್ನ ಲಗೇಜ್ ಜೊತೆ ಸಾಗಿಸುತ್ತಿದ್ದಳು. ಇದು ಎಕ್ಸ್​ರೇ ಮೆಷಿನ್​ನಲ್ಲಿ ಪತ್ತೆಯಾಗಿದ್ದು, ಕೂಡಲೇ ಮಹಿಳೆಯನ್ನ ಬಂಧಿಸಿ ಹಲ್ಲಿಗಳನ್ನ ರಕ್ಷಿಸಲಾಗಿದೆ. ಹಲ್ಲಿಗಳನ್ನ ಪಶುವೈದ್ಯರು ಪರೀಕ್ಷೆಗೊಳಪಡಿಸಿದ ಬಳಿಕ ಅವುಗಳನ್ನ ಕಾಡಿಗೆ ಬಿಡೋದು ಅಥವಾ ಯಾವುದಾದರೂ ಶಾಲೆ ಅಥವಾ ಎನ್​ಜಿಒಗೆ ದಾನ ನೀಡುವ ಬಗ್ಗೆ ನಿರ್ಧರಿಸಲಾಗುತ್ತಂತೆ. ಮಹಿಳೆ ಕದ್ದು ಹಲ್ಲಿಗಳನ್ನ ಸಾಗಿಸುತ್ತಿದ್ದುದ್ದು ಸಾಬೀತಾದಲ್ಲಿ ಆಕೆಗೆ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv