ಕೊನೆಗೂ ಪ್ರತ್ಯೇಕತಾವಾದಿ ಪಾಪಿಗಳಿಗೆ ನೀಡಿದ್ದ ಭದ್ರತೆಯನ್ನ ವಾಪಸ್​ ಪಡೆದ ಕೇಂದ್ರ

ನವದೆಹಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಭದ್ರತೆಯನ್ನು ಹಿಂಪಡೆದಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಜಮ್ಮು ಸರ್ಕಾರ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನ ವಾಪಸ್​ ಪಡೆದಿದೆ. ಕಳೆದ 14 ರಂದು ಇಡೀ ದೇಶವೇ ಪ್ರೇಮಿಗಳ ದಿನಾಚರಣೆ ಸಂಭ್ರಮದಲ್ಲಿತ್ತು. ಆದ್ರೆ ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ನರಿಬುದ್ಧಿಯ ಪಾಕಿಸ್ತಾನದ ಕುಮ್ಮಕ್ಕಿನಿಂದ ಉಗ್ರ ಅದಿಲ್ ಅಹಮದ್‌ದಾರ್ ಆರ್​ಡಿಎಕ್ಸ್ ಬಾಂಬ್​ ಬಳಸಿ 44 ಸಿಆರ್​ಪಿಎಫ್​ ಯೋಧರನ್ನ ಕೊಂದಿದ್ದ. ಇದ್ರಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಮಿರ್ವೈಜ್ ಉಮರ್ ಫಾರೂಕ್, ಶಬೀರ್ ಶಾ, ಹಶಿಮ್ ಖುರೇಷಿ, ಬಿಲಾಲ್ ಲೋನ್ ಮತ್ತು ಅಬ್ದುಲ್ ಘನಿ ಭಟ್ ಸೇರಿದಂತೆ ಇನ್ನಿತರ ಪ್ರತ್ಯೆಕತಾವಾದಿಗಳಿಗೆ ನೀಡಿದ್ದ ನೆರವನ್ನ ವಾಪಸ್​ ಪಡೆದಿದೆ.
ಕಾಶ್ಮೀರ ಪ್ರತ್ಯೇಕತಾ ವಾದಿಗಳಿಗೆ ಪಾಕಿಸ್ತಾನದಿಂದ ಹಣದ ನೆರವು ಹರಿದು ಬರುತ್ತಿದ್ದು, ಯೋಧರ ಮೇಲೆ ಕಲ್ಲು ತೂರಾಟ, ಪುಲ್ವಾಮದಲ್ಲಿ ಇತ್ತೀಚೆಗೆ ನಡೆದಂತಹ ಹೇಯ ಕೃತ್ಯಗಳಿಗೆ ಒಳಗಿನಿಂದಲೇ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯ ಪಾಕಿಸ್ತಾನವೇ ಆರ್ಥಿಕವಾಗಿ ದಿವಾಳಿಯಾಗಿದ್ದು, ಕತ್ತೆಗಳನ್ನ ಮಾರುವ ಪರಿಸ್ಥಿತಿಗೆ ಬಂದಿದೆ. ಇದರ ಪರಿಣಾಮ ಪ್ರತ್ಯೇಕತಾವಾದಿಗಳ ಮೇಲೂ ಬೀರಿದೆ. ಸದ್ಯ ಪಾಕಿಸ್ತಾನದ ದುಡ್ಡು ತಿಂದು ಭಾರತದ ಭದ್ರತೆಯಲ್ಲಿದ್ದ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ನಿಡಿದ್ದ ಭದ್ರತೆಯನ್ನ ವಾಪಸ್​ ಪಡೆದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv