ಕಾರು ಚಾಲಕನ ಹತ್ಯೆ: ಮೊದಲ ಅಪರಾಧಿಗೆ ಗಲ್ಲು ಶಿಕ್ಷೆ, ಇಬ್ಬರಿಗೆ ಜೀವಾವಧಿ‌

ಬಾಗಲಕೋಟೆ: ಕಾರು ಅಪಹರಿಸಿ, ಚಾಲಕನನ್ನ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿಗೆ, ಜಮಖಂಡಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

7 ವರ್ಷಗಳ ಹಿಂದೆ 2012ರ ಆಗಸ್ಟ್​​ 13ರಂದು ರಾಘವೇಂದ್ರ ಸಂಗೊಳ್ಳಿ(29) ಎಂಬ ಕಾರು ಚಾಲಕನನ್ನ, ಕಾರು ಬಾಡಿಗೆಗೆಂದು ಕರೆದುಕೊಂಡು ಹೋಗಿದ್ದರು. ನಂತರ ಚಾಲಕನ ಕೈ ಕಾಲು ಕಟ್ಟಿ ಹಾಕಿ, ಆತನನ್ನ ಜಿಲ್ಲೆಯ ಬೀಳಗಿ ಸಮೀಪದ ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಎಸೆದು ಕೊಲೆಗೈಯ್ಯಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಜಮಖಂಡಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ, ನ್ಯಾಯಾಧೀಶರಾದ ಎ.ಕೆ ನವೀನಕುಮಾರಿ ಕೊಲೆಯ ಪ್ರಮುಖ ಆರೋಪಿ ಶರಣಬಸವ ಸಿದ್ದಪ್ಪ ದೇಗಿನಾಳಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

ಇನ್ನು ಪ್ರಕರಣದ ಇನ್ನಿಬ್ಬರು ಅಪರಾಧಿಗಳಾದ ರೇಬಣ್ಣ ಸೀತಿಮನಿ, ಆಯಾಳಸಿದ್ದ ದೊಡ್ಡಮನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅದಲ್ಲದೇ ಪ್ರಕರಣದ ಎಲ್ಲಾ ಮೂವರು ಅಪರಾಧಿಗಳಿಗೂ ನ್ಯಾಯಾಲಯ ತಲಾ 2 ಲಕ್ಷ ದಂಡ ವಿಧಿಸಿದೆ. ಇನ್ನು ಕೊಲೆಗಾರರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ನಿವಾಸಿಗಳು. ಕೊಲೆಯಾದ ಕಾರು ಚಾಲಕ ರಾಘವೇಂದ್ರ ಸಂಗೊಳ್ಳಿ ಜಮಖಂಡಿ‌ ನಗರ ನಿವಾಸಿ ಎಂದು ತಿಳಿದು ಬಂದಿದೆ.

ಕೊಲೆಯಾದ ಕಾರು ಚಾಲಕ ರಾಘವೇಂದ್ರ ಸಂಗೊಳ್ಳಿ
ಕೊಲೆಯಾದ ಕಾರು ಚಾಲಕ ರಾಘವೇಂದ್ರ ಸಂಗೊಳ್ಳಿ
ಕೊಲೆ ಪ್ರಕರಣದ ಮೂವರು ಅಪರಾಧಿಗಳು
ಕೊಲೆ ಪ್ರಕರಣದ ಮೂವರು ಅಪರಾಧಿಗಳು

 


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv