ಹಳೇ ಪ್ರೀಮಿಯರ್​ ಪದ್ಮಿನಿ ಕಾರ್​ನಲ್ಲಿ ಜಗ್ಗೇಶ್​ ಪ್ರಚಾರ..!

ನವರಸ ನಾಯಕ ಜಗ್ಗೇಶ್​, ಮಧುಬಾಲ ಅಭಿನಯದ ಪ್ರೀಮಿಯರ್​ ಪದ್ಮಿನಿ ಸಿನಿಮಾ ಈ ವಾರ ತೆರೆಗೆ ಬರ್ತಾ ಇದ್ದು, ಸಿನಿಮಾದ ಪ್ರಚಾರಕ್ಕಾಗಿ ವಿಶೇಷ ಕಾರೊಂದನ್ನ ಸಿದ್ದ ಪಡಿಸಿದ್ದಾರೆ ನಿರ್ಮಾಪಕಿ ಶ್ರುತಿ ನಾಯ್ಡು. ಒಂದು ಹಳೇ ಪ್ರೀಮಿಯರ್​ ಪದ್ಮಿನಿ ಕಾರನ್ನೇ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಿ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳಲಾಗ್ತಾ ಇದೆ. ಜಗ್ಗೇಶ್​ ಮೊದಲ ಬಾರಿಗೆ ತಮ್ಮ ಎಂದಿನ ಕಾಮಿಡಿ ಜಾನರ್​ಬಿಟ್ಟು ತುಂಬಾನೇ ಇಷ್ಟ ಪಟ್ಟು ಮಾಡಿರೋ ಸಿನಿಮಾ ಪ್ರೀಮಿಯರ್ ಪದ್ಮಿನಿ. ಇದೇ ಕಾರಣಕ್ಕೆ ಸಿನಿಮಾಕ್ಕೆ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಮಾಡೋ ಪ್ರಯತ್ನ ಇದಾಗಿದೆ. ವಿಶೇಷ ಅಂದ್ರೆ ಸಿನಿಮಾದ ಚಿತ್ರೀಕರಣಕ್ಕಾಗಿ ಬಳಸಿರೋ ಕಾರಿನಲ್ಲೇ ಈಗ ಸಿನಿಮಾ ಪ್ರಚಾರ ಮಾಡ್ತಿರೋದು.
ಈ ವಾರ ರಿಲೀಸ್​ ಆಗ್ತಾ ಇದೆ ಪ್ರೀಮಿಯರ್ ಪದ್ಮಿನಿ
ಈ ಸಿನಿಮಾವನ್ನ ಖ್ಯಾತ ಕಿರುತೆರೆ ಧಾರಾವಾಹಿ ನಿರ್ದೇಶಕ ರಮೇಶ್​ ಇಂದಿರಾ ನಿರ್ದೇಶನ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಕ್ಯಾಮರಾ ವರ್ಕ್​ ಸಿನಿಮಾಕ್ಕಿದ್ದು, ಅರ್ಜುನ್ ಜನ್ಯಾ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ. ಜಗ್ಗೇಶ್​ ಜೊತೆಗೆ ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ವಿವೇಕ್ ಸಿಂಹ ಸೇರಿದಂತೆ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಇದೇ ಶುಕ್ರವಾರ ಅಂದ್ರೆ 26ನೇ ತಾರೀಖು ಪ್ರೀಮಿಯರ್ ಪದ್ಮಿನಿ ರಾಜ್ಯಾದ್ಯಂತ ತೆರೆಕಾಣ್ತಾ ಇದೆ.