ಸೈನಿಕರಿಗೆ, ಪ್ರಧಾನಿ ಮೋದಿ ನೀಡುವ ಸ್ವಾತಂತ್ರ್ಯದಿಂದ ದಾಳಿ ನಡೆದಿದೆ -ಶೆಟ್ಟರ್

ಹುಬ್ಬಳ್ಳಿ: ಉಡಾಫೆಗೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಕಲ್ಚರ್, ಸಂಸ್ಕೃತಿ, ಕೆಟ್ಟ ಭಾಷೆ, ದುರಹಂಕಾರದ ಮಾತುಗಳು ಸಿದ್ದರಾಮಯ್ಯ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಬರುವುದಿಲ್ಲ. ಅದು ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಿದ್ದರಾಮಯ್ಯನವರು ರಾಜಕೀಯ ಗುಂಗಿನಲ್ಲಿ ಇರುತ್ತಾರೆ. ಹಾಗಾಗಿ ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮಸ್ಯೆ ಉಲ್ಭಣ ಆಗುವುದಕ್ಕೆ ಮೂಲ ಕಾರಣ ಕಾಂಗ್ರೆಸ್ ಪಕ್ಷ. ದೇಶದ ಶಾಂತಿ ನೆಮ್ಮದಿ ಕಾಂಗ್ರೆಸ್ ಪಕ್ಷದಿಂದಲ್ಲೇ ಹಾಳಾಗಿದೆ. ಸುರಕ್ಷತೆ ಕೊಡುವ ಭಾವನೆಯನ್ನು ಪ್ರಧಾನಿಯವರು ಮಾಡುತ್ತಿದ್ದಾರೆ. ವಾಯುಪಡೆ ನಡೆಸಿದ ಏರ್ ಸ್ಟ್ರೈಕ್‌ನಲ್ಲಿ 300 ಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿದೆ. 20-30 ಜನ ಸುಸೈಡ್ ಬಾಂಬರ್‌ ಹತ್ಯೆ ಮಾಡಲಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷ 60- 70 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ್ದೇ. ಈ ತರಹದ ದೊಡ್ಡ ಮಟ್ಟದ ದಾಳಿಯನ್ನು ಮಾಡಿದೆಯಾ..? ಎಲ್ಒಸಿ ರೇಖೆ ದಾಟಿ ಸೈನಿಕರು ದಾಳಿ ಮಾಡಲು ಆಗಿರಲಿಲ್ಲ. ಯಾಕೆ ಅಂದರೆ ಕಾಂಗ್ರೆಸ್ ಪಕ್ಷ ಸೈನಿಕರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಇದರಿಂದಾಗಿ ಇಷ್ಟೊಂದು ದೊಡ್ಡ ಮಟ್ಟದ ಅಟ್ಯಾಕ್ ಆಗಿರಲಿಲ್ಲ. ಈಗ ಅದೂ ಆಗಿದೆ, ನಮ್ಮ ಸೈನಿಕರಿಗೆ ಪ್ರಧಾನಿ ಮೋದಿಯವರು ನೀಡುವ ಸ್ವಾತಂತ್ರ್ಯದಿಂದ ದಾಳಿ ನಡೆದಿದೆ ಎಂದು ಶೆಟ್ಟರ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv