‘ರೇವಣ್ಣ ಅವ್ರೇ ಈಗಲೇ ರಾಜಕೀಯ ನಿವೃತ್ತಿ ಪಡೆಯಿರಿ’

ಗದಗ: ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಗ್ಯಾರಂಟಿ. ರೇವಣ್ಣ ಅವ್ರೇ ಈಗಲೇ ರಾಜಕೀಯ ನಿವೃತ್ತಿ ಆಗಿ ಬಿಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆದ್ರೆ  ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೆಚ್.ಡಿ ರೇವಣ್ಣ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ನಿವೃತ್ತಿ ಆಗ್ತೆೇವೆ ಅಂತಾ ಬರೀ ಸುಳ್ಳು ಹೇಳಿಕೆ ಕೊಡಬೇಡಿ. ಕಳೆದ ಲೋಕಸಭಾ ಚುನಾವಣೆ ಮೋದಿ ಪಿಎಂ ಆದ್ರೆ ದೇವೇಗೌಡ್ರು ರಾಜಕೀಯ ನಿವೃತ್ತಿ ಆಗ್ತೀನಿ ಅಂದಿದ್ರು. ಆದ್ರೆ ಮೋದಿ ಪ್ರಧಾನಿ ಆಗಿ ಐದು ವರ್ಷ ಆದ್ರೂ ದೇವೇಗೌಡರು ನಿವೃತ್ತಿ ಆಗಿಲ್ಲ. ದೇವೇಗೌಡರ ಫ್ಯಾಮಿಲಿ ಇಷ್ಟು ದಿನ ಅಪ್ಪ ಮಕ್ಕಳ ಪಾರ್ಟಿ ಆಗಿತ್ತು. ಈಗ ಅಪ್ಪ ಮಕ್ಕಳು ಸೊಸೆಯರು ಹಾಗೂ ಮೊಮ್ಮಕ್ಕಳ ಪಾರ್ಟಿ ಆಗಿದೆ ಎಂದು ಸಚಿವ ರೇವಣ್ಣ ವಿರುದ್ಧ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv