ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ: ಜಗದೀಶ ಶೆಟ್ಟರ್

ಕೊಪ್ಪಳ:  ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ದೇಶದಲ್ಲಿ ಇದೊಂದು ದೊಡ್ಡ ದುರಂತ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಮಾಜಿ ಸಚಿವ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.  ಕೊಪ್ಪಳದಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರ ನಾಯಕತ್ವದ ಮೇಲೆ ವಿಶ್ವಾಸ ಇದೆ. ಉಗ್ರಗಾಮಿಗಳ ಚಟುವಟಿಗಳನ್ನು ಮಟ್ಟಹಾಕುವ ಕೆಲಸ ನಡೆದಿದೆ. ಇದು ಪೈಶಾಚಿಕ ಕೃತ್ಯ ಇದನ್ನು ಇಡೀ ದೇಶ ಖಂಡಿಸಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಈ ರೀತಿ ಕುಮ್ಮಕ್ಕ ನೀಡುವ ಕೆಲಸವನ್ನ ಪಾಕಿಸ್ತಾನ ಮಾಡುತ್ತಿದೆ. ಉಗ್ರಗಾಮಿಗಳನ್ನು ನಿಯಂತ್ರಿಸುವ ಕೆಲಸ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

40, 50 ವರ್ಷಗಳಿಂದ ನಡೆಯುತ್ತಿರುವ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ನಕ್ಸಲ್​​​ ಚಟುವಟಿಕೆಯನ್ನು ಈ 5 ವರ್ಷದಲ್ಲಿ ಮೋದಿ ನಿಲ್ಲಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಮಾಡಬೇಕಾಗಿದೆ. ಇದನ್ನು‌ ಮಟ್ಟ ಹಾಕುವ ಸಂಪೂರ್ಣ ಚರ್ಚೆ ನಡೆಯುತ್ತಿದೆ. ಕ್ಯಾಬಿನೆಟ್ ನಲ್ಲಿ ಸಂಪೂರ್ಣವಾಗಿ ಸೈನಿಕರಿಗೆ ಅಧಿಕಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ನಡೆದಾಗ ಯಾರು ರಾಜಕೀಯ ಮಾಡಬಾರದು. ಪ್ರತಿಯೊಬ್ಬರು ಜವಾಬ್ದಾರಿಯಿಂದ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಶೆಟ್ಟರ್ ಹೇಳಿದರು.

ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು,  ಸಂಭಾಷಣೆ ಕದ್ದಾಲಿಕೆ ಮಾಡಿದ್ದು ಕಾನೂನು ಬಾಹಿರ. ಇಬ್ಬರ ಸಂಭಾಷಣೆಯನ್ನು ಕದ್ದಾಲಿಕೆ ಮಾಡುವುದು ತಪ್ಪು. ಅದನ್ನು ಸಿಎಂ‌ ಕುಮಾರಸ್ವಾಮಿ ಅವರು ಮಾಡಿದ್ದಾರೆ. ಬಜೆಟ್ ನಂತರ ಹೆಸರು ಬಹಿರಂಗ ಮಾಡಬೇಕಾಗಿತ್ತು. ತರಾತುರಿಯಲ್ಲಿ ಸ್ಪೀಕರ್ ರಮೇಶ ಕುಮಾರ ಹೆಸರು ತರಲಾಗಿದೆ. ಇದಕ್ಕೆಲ್ಲ‌ ಪ್ರಮುಖ ಆರೋಪಿ ಸಿಎಂ‌ ಹೆಚ್ ಡಿ ಕುಮಾರಸ್ವಾಮಿ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ರು. ಎಸ್‌ಐಟಿ ಗೆ ಒಪ್ಪಿಸಲು ನಮ್ಮ ತಕರಾರು ಇಲ್ಲ. ಸಿದ್ದರಾಮಯ್ಯ ಅವರಲ್ಲಿಯೇ ಈ ಕುರಿತು ದ್ವಂದ್ವ ನಿಲುವು ಇದೆ. ಸದನ ಸಮತಿಯಲ್ಲಿಯೂ ಈ ಪ್ರಕರಣ ಬಗ್ಗೆ ತನಿಖೆ ಮಾಡಬಹುದು. ಮಾತನಾಡುವ ವಿಚಾರದಲ್ಲಿ ಎಡಿಟ್ ಮಾಡಲಾಗಿದೆ ಅಂತ ಸ್ಪಷ್ಟಪಡಿಸಲಾಗಿದೆ ಎಂದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv