‘ಸಂವಿಧಾನ ಬದಲಾಣೆ ಮಾಡುವ ಪ್ರಶ್ನೆಯೇ ಇಲ್ಲ, ಅಪಪ್ರಚಾರ ಮಾಡಲಾಗ್ತಿದೆ’

ಹುಬ್ಬಳ್ಳಿ: ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಭಾರತೀಯ ಜನತಾ ಪಾರ್ಟಿ ದೇಶದ ಸಂವಿಧಾನಕ್ಕೆ ಬದ್ಧವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಶೋಷಿತ ವರ್ಗ ಸಂಪೂರ್ಣ ಅಭಿವೃದ್ಧಿ ಆಗುವವರೆಗೂ ಮೀಸಲಾತಿ ಇರಬೇಕು ಎನ್ನುವುದು ಬಿಜೆಪಿ ಪಕ್ಷದ ಆಶಯವಾಗಿದೆ. ಬಿಜೆಪಿ ಸಂವಿಧಾನ ಬದಲಾಣೆ ಮಾಡುತ್ತೆ ಎನ್ನುವುದು ಅಪಪ್ರಚಾರ. ಅಂಬೇಡ್ಕರ್ ‌ಅವರ ವಿಚಾರಧಾರೆಗಳ ಜಾಗೃತಿ ಮಾಡುವ ಕೆಲಸ ಇಂದು ನಡೆಯುತ್ತಿದೆ.ಅಂಬೇಡ್ಕರ್ ಬರೆದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ದೇಶದಲ್ಲಿ ಶಾಂತ ರೀತಿ ಆಡಳಿತ, ಚುನಾವಣೆಗಳು ನಡೆಯುತ್ತಿವೆ ಅಂದರೆ ಅದಕ್ಕೆ ಸಂವಿಧಾನ ಮೂಲ ಕಾರಣ ಎಂದು ಶೆಟ್ಟರ್ ಹೇಳಿದರು.

ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ನಾವು ಗೆಲ್ಲುತ್ತೇವೆ. ದೇಶದಲ್ಲಿ 300ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಕೇಂದ್ರದಲ್ಲಿ ಸುಭದ್ರವಾದ ಸರ್ಕಾರ ಬರುತ್ತೆ
ಕಾಂಗ್ರೆಸ್‌ ಪಕ್ಷದ ಹತಾಶಯ ಒಂದೊಂದು ಕಡೆ ಹೋರ ಬರುತ್ತಿವೆ. ಕಳೆದ ದಿನ ಗೃಹ ಸಚಿವರ ಬೆಂಬಲಿಗರು ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಧಿಕ್ಕಾರ ಕೂಗಿ ಹಲ್ಲೆಗೆ ಯತ್ನಿಸಿದ್ದಾರೆ. ಗೃಹ ಸಚಿವ ಎಂ ಬಿ‌ ಪಾಟೀಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹತಾಶೆ ಹೋರ ಬರುತ್ತಿದೆ. ನಮ್ಮ ಪಕ್ಷದ ಮುಖಂಡ ಎ ಎಸ್ ನಡಹಳ್ಳಿ ಪಾಟೀಲ್ ಮೇಲೆ ಕಾಂಗ್ರೆಸ್ ನ ಕಾರ್ಯಕರ್ತರ ಹಲ್ಲೆಗೆ ಯತ್ನಿಸಿದ್ದಾರೆ. ನಡಹಳ್ಳಿಯವರ ಟೀಕೆಗೆ ನೀವು ಶಾತ ರೀತಿಯಾಗಿ ಉತ್ತರ ನೀಡಿ. ಅದನ್ನು ಬಿಟ್ಟು ಗುಂಡಾಗಳನ್ನು ಕಳಹಿಸಿ ಹಲ್ಲೆ ಮಾಡಿಸುವುದಲ್ಲ. ಎಂ.ಬಿ ಪಾಟೀಲ್ ಅವರ ಗುಂಡಾತನ ಬಹಳ ದಿನ ನಡೆಯುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

ಮಂಡ್ಯದಲ್ಲಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಮಂಡ್ಯದಲ್ಲಿ ತಮ್ಮ ಮಗನನ್ನು ಗೆಲ್ಲಿಸಲು 150 ಕೋಟಿ ಖರ್ಚು ಮಾಡುತ್ತಾರಂತೆ. ಜೆಡಿಎಸ್ ಪ್ರಮುಖ ಕಾರ್ಯಕರ್ತರೆೇ ಮಾತಾಡ್ತಿದ್ದಾರೆ. ಆದರೆ ಮಂಡ್ಯದಲ್ಲಿ ಯಾವ ರೀತಿ ಚುನಾವಣೆ ನಡೆಯಿತ್ತಿದ್ದೆ ಎಂಬುವುದು ಗೋತ್ತಾಗುತ್ತಿದೆ ಎಂದು ಆರೋಪಿಸಿದ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv