ಉಮೇಶ್ ಜಾಧವ್ ಸೂಚಿಸಿದವರಿಗೆ ಟಿಕೆಟ್ ನೀಡಲಾಗಿದೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಉಮೇಶ್ ಜಾಧವ್ ಸೂಚಿಸಿದವರಿಗೆ ಟಿಕೆಟ್ ನೀಡುತ್ತೆವೆಂದು ಒಪ್ಪಿಕೊಂಡಾಗಿತ್ತು. ಹೀಗಾಗಿ ಅವರ ಪುತ್ರನಿಗೆ ಟಿಕೆಟ್ ನೀಡಲು‌ ಮುಂದಾಗಿದ್ದೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಚಿಂಚೋಳಿಯಲ್ಲಿ ಉಮೇಶ್ ಜಾಧವ್ ಪುತ್ರನಿಗೆ ಟಿಕೆಟ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ನಮಗೆ ಟಿಕೆಟ್ ನೀಡೋದು ಅನಿವಾರ್ಯವಾಗಿತ್ತು. ಏಕಂದ್ರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ‌‌ ಲೋಕಸಭಗೆ ಸ್ಪರ್ಧೆ ಮಾಡಿದ್ದರು. ಹೀಗಾಗಿ ಅವರ ಪುತ್ರನಿಗೆ ಮಣೆಹಾಕಲು ನಿರ್ಧರಿಸಲಾಗಿದೆ. ಅಲ್ಲಿರುವ ಅಸಮಧಾನವೂ ಬಗೆಹರಿಯುತ್ತೆ ಎಂದು ಶೆಟ್ಟರ್ ಹೇಳಿದರು.

ಕುಂದಗೋಳ ಬೈ ಎಲೆಕ್ಷನ್ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಕುಂದಗೋಳ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತವಾಗಿ ಎಸ್‌ಐ ಚಿಕ್ಕನಗೌಡ್ರು ಕಣದಲ್ಲಿದ್ದಾರೆ. ನಾಳೆ ಎಸ್‌.ಐ ಚಿಕ್ಕನಗೌಡ್ರು ನಾಮ ಪತ್ರವನ್ನು ಸಲ್ಲಿಸುತ್ತಾರೆ. ಎಂ ಆರ್ ಪಾಟೀಲ್ ಅವರ ಮನವೊಲಿಸುತ್ತೇವೆ ಎಂದರು. ಕುಂದಗೋಳ ಬೈ ಎಲೆಕ್ಷನ್‌ನಲ್ಲಿ, ಕಾಂಗ್ರೆಸ್ ಪಕ್ಷದಿಂದ ಡಿ .ಕೆ ಶಿವಕುಮಾರ್ ಉಸ್ತುವಾರಿ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ಯಾವ ನಾಯಕರು ಇಲ್ವಾ? ಡಿ.ಕೆ ಶಿವಕುಮಾರ್ ಅಲ್ಲ. ಯಾರೇ ಬಂದರೂ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv