ಏರ್‌ ಬೇಸ್‌ನಲ್ಲಿ ಅಗ್ನಿ ದುರಂತ, ಭದ್ರತಾ ವೈಫಲ್ಯವೇ ಕಾರಣ -ಶೆಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದೊಡ್ಡ ದಂಧೆ ಆಗಿಬಿಟ್ಟಿದೆ. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಇಲ್ಲಿ ನಡೆಯುತ್ತಿದೆ. ಯಾರೊಬ್ಬ ಅಧಿಕಾರಿಗಳು ಉತ್ಸುಕರಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ದಂಧೆಯಿಂದ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಏರ್ ಶೋದಲ್ಲಿ ಭದ್ರತಾ ವ್ಯವಸ್ಥೆಯ ವೈಫಲ್ಯ. ಭದ್ರತಾ ವ್ಯವಸ್ಥೆ ವೈಫಲ್ಯದಿಂದಾನೇ ನೂರಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಶೆಟ್ಟರ್ ಹೇಳಿದ್ದಾರೆ.

ಬಿಜೆಪಿ ನಾಯಕತ್ವದ ಎನ್‌ಡಿಎ ಮೈತ್ರಿ ಈಗಾಗಲೇ ಕ್ಲಿಯರ್ ಆಗಿದೆ
ಬಿಜೆಪಿಗೆ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಮಂತ್ರಿಗಳೇ ಅಭ್ಯರ್ಥಿಗಳಾಗಿ ಫೈಟ್ ಮಾಡಲಿ. ಇಲ್ಲವಾದರೆ ಸಿಂಗಲ್ ಆಗಿ ಬಂದರೂ ನಮಗೆ 22 ಸ್ಥಾನವಂತೂ ಖಚಿತ. ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದ ವತಿಯಿಂದ ಸಂಪೂರ್ಣ ತಯಾರಿ ನಡೆಸಿದೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಕ್ಯಾಂಡಿಡೇಟ್ ಎಂದು ಘಟಬಂಧನ್​​ ನಾಯಕರು ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಪಕ್ಷದ ಎನ್‌ಡಿಎ ನೇತೃತ್ವದಲ್ಲಿ ಮೈತ್ರಿ ಈಗಾಗಲೇ ಕ್ಲಿಯರ್ ಆಗಿದೆ. ಹಲವು ನಾಯಕರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಯಾವುದೇ ಸಾಕ್ಷಿ ಇಲ್ಲದೆ ಮಾತಾಡುವುದು ಎಷ್ಟು ಸರಿ? ಐದು ವರ್ಷದಲ್ಲಿ ಮೋದಿಯವರು ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ದೇಶದಲ್ಲಿ ಮೋದಿ‌ ನಾಯಕತ್ವಕ್ಕೆ ಬೆಂಬಲ ಸಿಗುತ್ತಿದೆ. ಅವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv