’23ರ ಫಲಿತಾಂಶ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ‌’

ಹುಬ್ಬಳ್ಳಿ: ಸಂಘಟನೆಯ ಮೂಲಕ ಕುಂದಗೋಳದಲ್ಲಿ ಬಿಜೆಪಿ ಗೆಲ್ಲಲಿದೆ. 23ರ ಫಲಿತಾಂಶ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ‌ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಿಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ನಾಮಪತ್ರ ಸಲ್ಲಿಕೆಯಾಗಿದೆ. ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. 23ರ ಫಲಿತಾಂಶ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ‌. ರಾಜ್ಯ ರಾಜಕಾರಣ ದಿಕ್ಸೂಚಿ ಆಗಲಿದೆ. ಸಮ್ಮಿಶ್ರ ಸರ್ಕಾರ ಏನೇ ಪ್ರಯತ್ನ ಮಾಡಲಿ. ನಮ್ಮ ಕಾರ್ಯಕರ್ತರು ಮತಗಟ್ಟೆಯ ಪೇಜ್‌ನಲ್ಲಿದ್ದಾರೆ. ಡಿ.ಕೆ ಶಿವಕುಮಾರ್ ‌ಸೇರಿ ನೂರು ಜನ ಬಂದ್ರು ಬಿಜೆಪಿ ಗೆಲುವು ಖಚಿತ‌. ಮೈತ್ರಿ ಸರ್ಕಾರದ ಪತನಕ್ಕೆ ದೇವೇಗೌಡ, ಸಿದ್ದರಾಮಯ್ಯ ಹೇಳಿಕೆಗಳೇ ಸಾಕ್ಷಿ. ಮೈತ್ರಿ ಸರ್ಕಾರ ಪತನ ಆದ್ರೆ ಅದರ ಲಾಭ ಪಡೆಯುತ್ತೇವೆ. ಅಧಿಕಾರ, ಹಣ ಬಲ ಚುನಾವಣೆ ಕೆಲಸ ಮಾಡಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv