ಆಡಿಯೋ ಪ್ರಕರಣದಲ್ಲಿ ಸ್ವತಃ ಕುಮಾರಸ್ವಾಮಿಯೂ ತಪ್ಪಿತಸ್ಥರು -ಶೆಟ್ಟರ್

ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವ್ರೂ ಭಾಗಿಯಾಗಿದ್ದಾರೆ. ಇಡೀ ಪ್ರಕರಣ ಅವರ ಪ್ರಚೋದನೆಯಿಂದಲೇ ನಡೆದಿದೆ. Instigate ಮಾಡಿರುವವರೇ ಅವರು. ಕುಟುಕು ಕಾರ್ಯಾಚರಣೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದೆ.  ​ಕುಟುಕು ಕಾರ್ಯಾಚರಣೆಯನ್ನ ಯಾರು ಪ್ರಚೋದಿಸುತ್ತಾರೋ ಅವರೂ ತಪ್ಪಿತಸ್ಥರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರೂ ಸಹ ಆಪಾದಿತರೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಪೀಕರ್​ ರೂಲಿಂಗ್​ ಪ್ರಕಾರ ಸಿಎಂ ಕುಮಾರಸ್ವಾಮಿ ಅವರು SIT ತನಿಖೆಗೆ ಆದೇಶಿಸುವುದು ಸರಿಯಲ್ಲ. ಏಕೆಂದ್ರೆ ಯಾವುದೇ ತನಿಖಾ ಸಂಸ್ಥೆಯೇ ಆದ್ರು ಅದು ಸಿಎಂ ಕುಮಾರಸ್ವಾಮಿ ಅವರ ಅಂಡರ್​​ ಬರುತ್ತದೆ. ಹಾಗಾಗಿ ನಿಷ್ಪಕ್ಷಪಾತದಿಂದ ತನಿಖೆ ನಡೆಯಬೇಕು ಅಂದ್ರೆ ಅದು ಸದನ ಸಮಿತಿಯಿಂದ ಆಗಬೇಕು ಅಥವಾ ನ್ಯಾಯಾಂಗ ತನಿಖೆಯಿಂದ ನಡೆಯಬೇಕು ಎಂಬುದು ನಮ್ಮ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದು ಜಗದೀಶ್​ ಶೆಟ್ಟರ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.