ಮುಖ್ಯಮಂತ್ರಿಯನ್ನು ಟೀಕಿಸಿದ್ದಕ್ಕೆ ಏನಾಯ್ತು ಗೊತ್ತಾ….?​

ನವದೆಹಲಿ: ಸರ್ಕಾರಿ ಶಾಲಾ ಹೆಡ್​ಮಾಸ್ಟರ್​ ಒಬ್ಬರು, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ ನಾಥ್​ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಟೀಕಿಸಿದ್ದರು. ಈ ರೀತಿ ಟೀಕಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗಿತ್ತು. ಇನ್ನು ಈ ವೀಡಿಯೋ ವೈರಲ್​ ಆಗುತ್ತಿದ್ದಂತೆ ಹೆಡ್​ಮಾಸ್ಟರ್ ಮುಖೇಶ್​ ತಿವಾರಿ ಎನ್ನುವವರನ್ನು ಜಬಲ್​ಪುರ್​ನ​ ಜಿಲ್ಲಾಧಿಕಾರಿ​ ಚಾವಿ ಭಾರದ್ವಾಜ್​ರವರು ಸಸ್ಪೆಂಡ್​ ಮಾಡಿದ್ದಾರೆ. ತಿವಾರಿಯವರು ಬುನಿಯಾದಿ ಸರ್ಕಾರಿ ಶಾಲೆಯ ಹೆಡ್​ಮಾಸ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಶಾಲೆಯಲ್ಲಿ ನಡೆದ ಮೀಟಿಂಗ್​ವೊಂದರಲ್ಲಿ ಮಾತನಾಡುವಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.