ದೋಸೆ ಎರೆಯುವ ಮೂಲಕ ಮತ ಬೇಟೆಗಿಳಿದ ಜೆ.ಶಾಂತಾ..!

ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪ ಚುನಾವಣೆಯ ಅಖಾಡ ರಂಗೇರುತ್ತಿದೆ. ಈಗಾಗಲೇ ಕೈ, ಕಮಲ ಪಕ್ಷದ ಅಭ್ಯರ್ಥಿಗಳು ಪ್ರಚಾರದ ಅಂಗಳಕ್ಕೆ ಇಳಿದಿದ್ದಾರೆ. ಅದರಂತೆ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಆಯುಧ ಪೂಜೆಯ ದಿನದಂದು ಬೆಳಗ್ಗೆಯಿಂದಲೇ ಮತಯಾಚನೆ ಆರಂಭಿಸಿದ್ದಾರೆ. ನಗರದ ಬಸವನಕುಂಟೆ ಹಾಗೂ ಶಿವಲಿಂಗ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ಪ್ರಚಾರದ ವೇಳೆ ಜೆ ಶಾಂತಾ ದೋಸೆ ಹಾಕುವ ಮೂಲತ ಮತಯಾಚನೆ ಮಾಡಿದ್ರು. ಈ ವೇಳೆ ಜೆ.ಶಾಂತಾಗೆ ಸ್ಥಳೀಯ ಮುಖಂಡರು ಸಾಥ್ ನೀಡಿದ್ದಾರೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: conatct@firstnews.tv