N-A-S-A ಬಗ್ಗೆ ‘ನಾಸಾ’ದಿಂದಲೇ ಸಿಂಗರ್​ಗೆ ಟ್ವೀಟ್..!

ಅಮೆರಿಕನ್ ಪಾಪ್ ಸಿಂಗರ್, ಅರಿಯಾನಾ ಗ್ರಾಂಡೆಯ ಹಾಡುಗಳು ಮ್ಯೂಸಿಕ್ ಪ್ರಿಯರಲ್ಲಿ ತನ್ನದೇ ಹೈಪ್ ಕ್ರಿಯೇಟ್ ಮಾಡುತ್ತವೆ. ಅವರ ಅಭಿಮಾನಿಗಳಂತೂ ಅರಿಯಾನಾರ ಹೊಸ ಆಲ್ಬಂ ಯಾವಾಗ ಬರುತ್ತೆ ಅಂತ ಕಾತರದಿಂದ ಕಾಯ್ತಿರ್ತಾರೆ. ಸದ್ಯಕ್ಕಂತೂ ಅರಿಯಾನಾರ ಫ್ಯಾನ್ಸ್ ಜೊತೆ ಖುದ್ದು ಅರಿಯಾನಾ ಕೂಡ ಫುಲ್ ಖುಷ್ ಆಗಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ‘ನಾಸಾ’ ಸಾಂಗ್ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲೂ ಇದೆ. ಇದೀಗ ಈ ಹಾಡು ಅಮೆರಿಕಾದ ಅಂತರಿಕ್ಷ ಯಾನ ಸಂಸ್ಥೆ ‘ನಾಸಾ’ದ ಗಮನವನ್ನೂ ಸೆರೆಳೆದಿದೆ.
ಹಾಡಿನಲ್ಲಿ ‘‘ಇಟ್ಸ್ ಲೈಕ್ ಯು ಆರ್ ದ ಯೂನಿವರ್ಸ್ ಌಂಡ್ ವಿ ಆರ್ N-A-S-A” ಅನ್ನೋ ಸಾಹಿತ್ಯವಿದೆ. ಇದೇ ಈಗ ‘ನಾಸಾ’ದ ಗಮನ ಸೆಳೆದಿರೋದು. ಈ ಬಗ್ಗೆ ನಾಸಾ ಅಫಿಷಿಯಲ್ ಅಕೌಂಟ್​ನಲ್ಲಿ ಟ್ವೀಟ್ ಮಾಡಲಾಗಿದ್ದು, ನಾವು ನಿಮ್ಮ ‘ನಾಸಾ’ ಹಾಡು ಟ್ರೆಂಡಿಂಗ್​ನಲ್ಲಿರೋದನ್ನ ನೋಡಿದ್ವಿ. ಇದು ನಮ್ಮ ಸಂಶೋಧನೆಯ ಬಗ್ಗೆ ಇರಬೇಕು ಅಂತ ಭಾವಿಸಿದ್ವಿ. ಆದ್ರೆ, ಹಾಡು ನೋಡಿದ ಬಳಿಕ ನಿಮಗೆ ಸ್ವಲ್ಪ ಸ್ಪೇಸ್ ಬೇಕು ಅನ್ನೋದು ಗೊತ್ತಾಯ್ತು ಅಂತ ಹೇಳಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv