ಖಚಿತ ಮಾಹಿತಿ ಆಧರಿಸಿ ಹಾಸನ, ಮಂಡ್ಯ, ಬೆಂಗಳೂರಿನಲ್ಲಿ ದಾಳಿ ನಡೆದಿದೆ: ಐಟಿ ಇಲಾಖೆ

ಬೆಂಗಳೂರು: ಇಂದು ಹಾಸನ, ಮಂಡ್ಯ ಮತ್ತು ಬೆಂಗಳೂರಿನ ಕೆಲವೆಡೆ ನಮ್ಮ ಇಲಾಖೆ ದಾಳಿ ನಡೆಸಿದೆ. ಕೆಲ ಉದ್ಯಮಿಗಳು,​ ಕಂಟ್ರಾಕ್ಟರ್​ಗಳು ಅಕ್ರಮವಾಗಿ ಹಣ ಮತ್ತು ಆಸ್ತಿ  ಸಂಪಾದಿಸಿದ್ದಾರೆ. ಅದಲ್ಲದೆ ಕೆಲವರು ಟ್ಯಾಕ್ಸ್​ ಕಟ್ಟುವಾಗ ತಮ್ಮ ಆಸ್ತಿಯ ವಿವರಗಳನ್ನ ಸರಿಯಾಗಿ ಘೋಷಿಸಿಲ್ಲ. ಈ ಬಗ್ಗೆ ಖಚಿತ ಮಾಹಿತಿಯನ್ನ ಆಧರಿಸಿ ದಾಳಿ ಮಾಡಲಾಗಿದೆ ಅಂತಾ ಕರ್ನಾಟಕ ಮತ್ತು ಗೋವಾ ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ತಿಳಿಸಿದೆ.

ಇಂದು ​ಹಾಸನದ 5 ಮನೆಗಳಲ್ಲಿ, ಬೆಂಗಳೂರಿನಲ್ಲಿ ಒಂದು ಕಡೆ ಹಾಗೂ ಮಂಡ್ಯದಲ್ಲಿ ಒಂದು ಕಡೆ ದಾಳಿ ನಡೆಸಲಾಗಿದೆ. ಇನ್ನು ಐಟಿ ದಾಳಿಗೊಳಗಾದವರು ರಿಯಲ್​ ಎಸ್ಟೇಟ್ ವ್ಯವಹಾರ, ಕಲ್ಲು ಕ್ವಾರಿ, ಸರ್ಕಾರಿ ಕಾಮಗಾರಿಗಳ ಕಂಟ್ರಾಕ್ಟರ್​ ಕೆಲಸ, ಪೆಟ್ರೋಲ್​ ಬಂಕ್​ಗಳು ಮತ್ತು ಸಹಕಾರಿ ಬ್ಯಾಂಕ್​ಗಳ ವ್ಯವಹಾರ ನಡೆಸುತ್ತಿದ್ದವರು. ಇವರು ಅಕ್ರಮವಾಗಿ ಹಣ ವರ್ಗಾವಣೆಗೆ ಮಾಡುತ್ತಿದ್ದಾರೆ ಎಂಬ ಶಂಕೆ ಇದೆ. ಹೀಗಾಗಿ ದಾಳಿ ನಡೆದ ಕಡೆ ಅನೇಕ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ ಅಂತಾ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv