‘ಐಟಿ ದಾಳಿ ನಂತ್ರ ಕಾಂಗ್ರೆಸ್​ನವ್ರು ಕುಂಬಳಕಾಯಿ ಕಳ್ಳರಂತೆ ಆಡ್ತಿದ್ದಾರೆ’

ಹುಬ್ಬಳ್ಳಿ: ಐಟಿ ಸಂಸ್ಥೆ ಒಂದು ಸ್ವತಂತ್ರ ಸಂಸ್ಥೆ.‌ ಆದ್ರೆ ತಮ್ಮ‌ ಕಪ್ಪು ಹಣ ರಕ್ಷಣೆ ಮಾಡಿಕೊಳ್ಳಲು ರಾಷ್ಟ್ರಪತಿಗಳಿಗೆ ದಿನೇಶ್​ ಗುಂಡೂರಾವ್ ಪತ್ರ ಬರೆದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಶೆಟ್ಟರ್​, ಕುಂಬಳ ಕಾಯಿ ಕಳ್ಳ ‌ಅಂದ್ರೆ ಹೆಗಲ ಮುಟ್ಟಿ ನೋಡಿಕೊಳ್ಳುವಂತೆ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ. ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಜರೂರತ್ ಏನಿದೆ? ಯಾವ ಆಧಾರದ ಮೇಲೆ ಪತ್ರ ಬರೆಯುತ್ತೀರಿ ಎಂದು‌ ಪ್ರಶ್ನಿಸಿದರು.ಇನ್ನು ಐಟಿ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ಇಂಜಿನೀಯರ್ಸ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಯಾವುದೇ ಶಾಸಕ, ಸಚಿವರ ಮನೆ ಮೇಲೆ ದಾಳಿ‌ ಮಾಡಿಲ್ಲ. ಇವರ ಮೇಲೆ ದಾಳಿ ಮಾಡಿದ್ದಕ್ಕೆ, ನೀವು ಪ್ರತಿಭಟನೆ  ಮಾಡಿದ್ರೆ ನಿಮ್ಮ ‌ಕಪ್ಪು ಹಣ ಅವರ ಮನೆಯಲ್ಲಿ‌ ಇದೆ ಅಂತ ಅರ್ಥವಾಗುತ್ತೆ. ಅವರನ್ನು ಯಾಕೆ ರಕ್ಷಣೆ ಮಾಡಲಿಕ್ಕೆ ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಮೂಲಕ ಪ್ರಚಾರ ತಗೆದುಕೊಳ್ಳುವ ತಂತ್ರ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv