ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ, ಪತ್ನಿ-ಪುತ್ರನ ವಿಚಾರಣೆ

ಮೈಸೂರು: ಸಚಿವ ಸಿ.ಎಸ್​​​. ಪುಟ್ಟರಾಜು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಬೃಂದಾವನ ಎಕ್ಸ್​​​​ಟೆನ್ಸೆನ್​​ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅಧಿಕಾರಿಗಳು ಸಿಎಸ್ ಪುಟ್ಟರಾಜು ಪತ್ನಿ ನಾಗಮ್ಮ, ಪುತ್ರ ಶಿವರಾಜ್ ಅವರನ್ನ ವಿಚಾರಣೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿಗಳು ಸಿ. ಎಸ್ ಪುಟ್ಟರಾಜು ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿದ್ದರು. ಈಗ ಮತ್ತೆ ಐಟಿ ಅಧಿಕಾರಿಗಳು ಸಿ.ಎಸ್. ಪುಟ್ಟರಾಜು ಮನೆ ಮೇಲೆ ತಲಾಶ್ ಮಾಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಪುಟ್ಟರಾಜು ಮನೆ ಶೋಧ ಕಾರ್ಯ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳು ಪುಟ್ಟರಾಜು ಮಗ ಶಿವರಾಜ್​ಗೆ​ ಏಪ್ರಿಲ್ 25 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv