ದೇವೇಗೌಡರ ಕುಲದೈವ ಅರ್ಚಕರ ಮನೆ ಮೇಲೆ ಐಟಿ ದಾಳಿ ನಡೆದಿಲ್ಲ-IT ಇಲಾಖೆ ಸ್ಪಷ್ಟನೆ

ಬೆಂಗಳೂರು: ದೇವೇಗೌಡರ ಕುಲದೇವರ ದೇವಸ್ಥಾನದ ಅರ್ಚಕರ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂಬ ವದಂತಿಯನ್ನು ಆದಾಯ ತೆರಿಗೆ ಇಲಾಖೆ ಅಲ್ಲಗಳೆದಿದೆ. ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ ಮನೆ ದೇವರಾದ ಹರದನ ಹಳ್ಳಿಯ ಈಶ್ವರ ದೇಗುಲ ಪ್ರಾಂಗಣ ಹಾಗೂ ದೇವಾಲಯ ಅರ್ಚಕ ಪ್ರಕಾಶ್​ ಭಟ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಅಂತಹ ಯಾವುದೇ ದಾಳಿಯನ್ನ ಆದಾಯ ತೆರಿಗೆ ಇಲಾಖೆ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv