ದರ್ಶನ್​ ಫಾರ್ಮ್​ ಹೌಸ್​ ಮೇಲೆ IT ದಾಳಿ ನಡೆದಿಲ್ಲ, ಆದ್ರೆ ಚುನಾವಣಾ ಅಧಿಕಾರಿಗಳಿಂದ ಸರ್ಚ್..!

ಮೈಸೂರು: ನಗರದ ಟಿ. ನರಸೀಪುರ ರಸ್ತೆಯಲ್ಲಿರುವ ದರ್ಶನ್ ಅವರ​ ತೂಗುದೀಪ ಫಾರ್ಮ್​ ಹೌಸ್​ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದು, ಫಾರ್ಮ್​ ಹೌಸ್​ ಅನ್ನ ಪೂರ್ತಿಯಾಗಿ ಶೋಧ ನಡೆಸಿ, ತೆರಳಿದ್ದಾರೆ.

ಪ್ರಾಣಿ ಪಕ್ಷಿಗಳನ್ನ ನೋಡಿಕೊಂಡು ಹೋಗ್ಲಿ ಬಿಡಿ
ಇನ್ನು  ದರ್ಶನ್​, ಸುಮಲತಾ ಅಂಬರೀಶ್​ ಪರ  ಮಂಡ್ಯದಲ್ಲಿ ಮತ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ ಚುನಾವಣೆ ಅಧಿಕಾರಿಗಳು ದಾಳಿ ಕುರಿತು ದರ್ಶನ್​ಗೆ ಆಪ್ತ ಮೂಲಗಳು ಮಾಹಿತಿ ನೀಡಿದ್ದು, ಪ್ರಾಣಿ ಪಕ್ಷಿಗಳನ್ನ ನೋಡಿಕೊಂಡು ಹೋಗ್ಲಿ ಬಿಡಿ ಎಂದು ಕೂಲ್​ ಆಗಿಯೇ ದರ್ಶನ್​ ಉತ್ತರಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೆಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಫಸ್ಟ್​ ನ್ಯೂಸ್ ಮಾಹಿತಿ ಪ್ರಕಾರ ಇಲ್ಲಿ ಚುನಾವಣೆ ಅಧಿಕಾರಿಗಳು ಸರ್ಚ್​ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv