ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ..!

ಬೆಂಗಳೂರು: ಐಟಿ ಡಿಜಿ ಬಿ.ಆರ್​​.ಬಾಲಕೃಷ್ಣನ್ ನೇತೃತ್ವದಲ್ಲಿ ನಗರದ 20ಕ್ಕೂ ಹೆಚ್ಚು ಕಡೆ ಇಂದು ಐಟಿ ದಾಳಿ ನಡೆಸಲಾಗಿದೆ. ಬೆಂಗಳೂರು ಪ್ಯಾಲೇಸ್​ ಡೆಕೋರೆಟರ್ ಅಮಾನುಲ್ಲಾ ಖಾನ್​​, ಗೋಲ್ಡನ್​​​ ಆರ್ಚರಿ ಮಾಲೀಕ ಕಮಲ್​ ಪಾಷಾ, ರಿಜ್ವಾನ್​ ಅರ್ಷದ್ ಆಪ್ತ, ರಿಯಲ್​​ ಎಸ್ಟೇಟ್ ಉದ್ಯಮಿ ನಯೀಜ್​ ಖಾನ್ ಮನೆ ಹಾಗೂ ಕಚೇರಿ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಗೆ 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಹಲವೆಡೆ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv