ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬೆಂಬಲಿಗರು ತಂಗಿದ್ದ ಹೋಟೆಲ್​ ಮೇಲೆ ಐಟಿ ದಾಳಿ

ಬಳ್ಳಾರಿ: ನಗರದ ಮೋಕಾ ರಸ್ತೆಯಲ್ಲಿರುವ ನಕ್ಷತ್ರ ಪಂಚತಾರಾ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬೆಂಬಲಿಗರು ನಕ್ಷತ್ರ ಹೋಟೆಲ್​ನಲ್ಲಿ ತಂಗಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರ ಭದ್ರತೆಯೊಂದಿಗೆ ಆಗಮಿಸಿದ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಹೋಟೆಲ್​ ಮೇಲೆ ದಾಳಿ ಮಾಡಿದ್ರು. ಸದ್ಯ ಯಾರನ್ನು ಒಳ ಬಿಡದೇ ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಇದೇ ಹೋಟೆಲ್​ನ ರೂಮ್​ ನಂ 217ರಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಕೂಡಾ ತಂಗಿದ್ರು. ಹೀಗಾಗಿ ಅನಿಲ್ ಲಾಡ್ ಕೋಣೆಯಲ್ಲಿಯೂ ಸಹ ಐಟಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ರು.