ದೇವೇಗೌಡರ ತಮ್ಮನ ಮಗ, ಸಚಿವ ರೇವಣ್ಣ ಆಪ್ತನ ಮನೆ ಮೇಲೂ ಐಟಿ ರೇಡ್​

ಹಾಸನ:  ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡರ ತಮ್ಮನ ಮಗ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಾಪಣ್ಣಿ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಚ್​ಡಿಡಿ ಹುಟ್ಟೂರು ಹರದನಹಳ್ಳಿಯಲ್ಲಿ ಪಾಪಣ್ಣಿ ವಾಸವಾಗಿದ್ದು, ಬೆಳ್ಳಂಬೆಳಗ್ಗೆ ಮೂರು ಇನ್ನೋವಾ ಕಾರಿನಲ್ಲಿ  ಆಗಮಿಸಿದ  15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇನ್ನೊಂದೆಡೆ ಲೋಕೋಪಯೋಗಿ ಸಚಿವ ಹೆಚ್​ಡಿ ರೇವಣ್ಣ ಆಪ್ತ ಕಾರ್ಲೆ ಇಂದ್ರೇಶ್ ಎಂಬುವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ತೀವ್ರ  ಶೋಧ ನಡೆಸಿದ್ದಾರೆ.  ನಗರದ ವಿದ್ಯಾನಗರದಲ್ಲಿ ಇಂದ್ರೇಶ್​ ವಾಸವಿದ್ದು, ಗುತ್ತಿಗೆದಾರರಾಗಿ ಹಾಗೂ ಹಾಸನ ಜಿಲ್ಲಾ ಕೋ-ಆಪರೇಟಿವ್​ ಸೆಂಟ್ರಲ್​ ಬ್ಯಾಂಕ್​​​(HDCC) ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv