ಸೋಲಿನ ಭೀತಿಯಿಂದ ಐಟಿ ದಾಳಿ ಮಾಡಿಸ್ತಿದ್ದಾರೆ-ಬೊಮ್ಮನಹಳ್ಳಿ ಬಾಬು

ಹಾವೇರಿ: ಐಟಿ ಇಲಾಖೆಯ ಅಧಿಕಾರಿಗಳು ನನ್ನ ಮೇಲೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವುಗಳನ್ನೂ ಸಿ.ಎಂ.ಉದಾಸಿಯವರು ತಮ್ಮ ಸೋಲಿನ ಭೀತಿಯಿಂದ ಮಾಡಿಸುತ್ತಿದ್ದಾರೆ. ಇಂತಹ ಯಾವ ದಾಳಿಗಳಿಗೂ ನಾನು ಹೆದರುವುದಿಲ್ಲ ಎಂದು ಹಾನಗಲ್ ಜೆಡಿಎಸ್ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ಅಬ್ಬರಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮನೋಹರ ತಹಶಿಲ್ದಾರ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಅಂತಾ ಜೆಡಿಎಸ್ ಪಕ್ಷ ಸೇರಲು ಬಂದಿದ್ದರು. ಜೆಡಿಎಸ್ ಸೇರಲು ಹಲವಾರು ಆಮಿಷಗಳನ್ನೂ ಒಡ್ಡಿದ್ದರು. ಕೊನೆ ಗಳಿಗೆಯಲ್ಲಿ ಕುಮಾರಸ್ವಾಮಿಯವರ ಮನವೊಲಿಸಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಈ ಬಾರಿ ಸಿ.ಎಂ. ಉದಾಸಿಯವರನ್ನು ಸೋಲಿಸಿಯೇ ತೀರುತ್ತೇನೆ ಎಂದು ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.