ಯಾವುದೇ ರಾಜಕೀಯ ವ್ಯಕ್ತಿಗಳ ಮೇಲೆ ದಾಳಿ ಮಾಡಿಲ್ಲ: ಐಟಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಐಟಿ ದಾಳಿಗಳ ಕುರಿತಂತೆ ಆದಾಯ ತೆರಿಗೆ ಇಲಾಖೆ ಅಧಿಕೃತ ಮಾಹಿತಿ ಹೊರಹಾಕಿದೆ. ಏಪ್ರಿಲ್ 10ನೇ ತಾರೀಕು ಗೋವಾ, ಬೆಳಗಾವಿ, ಹುಬ್ಬಳಿ, ಬಳ್ಳಾರಿ ಹಾಗೂ ಉಡುಪಿಯಲ್ಲಿ ಮಟ್ಕಾ ದಂಧೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಗೋವಾ ದಾಳಿಯಲ್ಲಿ ₹33 ಲಕ್ಷ ಅನಧಿಕೃತ ಹಣ ಪತ್ತೆಯಾಗಿತ್ತು.‌ ಬೆಳಗಾವಿ, ಗೋಕಾಕ್, ನಿಪ್ಪಾಣಿಯ ಕೆಲ ಗುತ್ತಿಗೆದಾರರು ಹಾಗೂ ಪಿಡಬ್ಲೂಡಿ ಇಂಜಿನಿಯರ್ಸ್​ ಮೇಲೆ ನಡೆದ ದಾಳಿಯಲ್ಲಿ ದಾಖಲೆ ಇಲ್ಲದ ₹62 ಲಕ್ಷ ಹಣ ಪತ್ತೆಯಾಗಿತ್ತು.

ಅಲ್ಲದೆ ಹುಬ್ಬಳ್ಳಿ, ಗದಗ್, ಬಳ್ಳಾರಿಯಲ್ಲಿ 6 PWD ಗುತ್ತಿಗೆದಾರರು ಹಾಗೂ ಹಣಕಾಸು ಅಧಿಕಾರಿಗಳ ಮೇಲೆ ನಡೆದ ದಾಳಿಯಲ್ಲಿ, ₹40.50 ಕೋಟಿ ಹಣ ಹಾಗೂ 12.5 kg ಚಿನ್ನ ಪತ್ತೆಯಾಗಿತ್ತು. ಉಡುಪಿಯಲ್ಲಿ ಟಾನ್ಸ್ ಪೊರ್ಟ್ ಉದ್ಯಮಿ ಮೇಲೆ ನಡೆದ ದಾಳಿಯಲ್ಲಿ ದಾಖಲೆ ಇಲ್ಲದ ₹10 ಲಕ್ಷ ಹಣ ವಶಕ್ಕೆ ಪಡೆಯಲಾಗಿತ್ತು.

ಜೊತೆಗೆ 11ನೇ ತಾರೀಕು ಬೆಂಗಳೂರಿನ ಮೂರು ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿಯಾಗಿತ್ತು. ಆ ವೇಳೆ, ಮೂವರಿಗೆ ಸಂಬಂಧಿಸಿದ ಬೆಂಗಳೂರು, ಚಿತ್ರದುರ್ಗ, ಕೋಲ್ಕತಾ ಸೇರಿ 23 ಕಡೆ ದಾಳಿ ಮಾಡಲಾಗಿತ್ತು. ದಾಳಿಯಲ್ಲಿ ₹85 ಲಕ್ಷ ನಗದು ಹಾಗೂ 13.5 kg ಬೆಳ್ಳಿ ಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇದುವರೆಗೂ ಯಾವುದೇ ರಾಜಕೀಯ ನಾಯಕರ ಮೇಲೆ ದಾಳಿ ನಡೆಸಿಲ್ಲ ಅಂತಾ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv