ಕಾರಿನ ಸ್ಟೆಪ್ನಿಯಲ್ಲಿ ₹2.30ಕೋಟಿ ಸಾಗಾಟ ಆರೋಪ, ಅಪ್ಪಾಜಿಗೌಡಗೆ ಐಟಿ ನೋಟಿಸ್..!

ಬೆಂಗಳೂರು: ಕಾರಿನ ಸ್ಟೆಪ್ನಿ ಚಕ್ರದಲ್ಲಿ ₹2.30 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಮಾಜಿ ಶಾಸಕ ಅಪ್ಪಾಜಿ ಗೌಡರಿಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಏಪ್ರಿಲ್ 20 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಭದ್ರಾವತಿ ಮಾರ್ಗವಾಗಿ ಬೆಂಗಳೂರಿನಿಂದ ಶಿವಮೊಗ್ಗಗೆ ತೆರಳುತ್ತಿದ್ದ ಕಾರೊಂದರ ಮೇಲೆ ದಾಳಿ ನಡೆಸಿದ್ದರು. ವಾಹನದ ಸ್ಟೆಪ್ನಿಯಲ್ಲಿ ಸಾಗಿಸುತ್ತಿದ್ದ 2,000 ರೂಪಾಯಿ ಮುಖ ಬೆಲೆಯ 2 ಕೋಟಿ 30 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಕಾರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆ ಹಣ ಅಪ್ಪಾಜಿಗೌಡರಿಗೆ ತಲುಪಿಸಲು ಹೊರಟ್ಟಿದ್ದೆ ಎಂದು ಹೇಳಿದ್ದ ಎನ್ನಲಾಗಿದೆ. ಚಾಲಕ ನೀಡಿರುವ ಮಾಹಿತಿ ಮೇರೆಗೆ ಮಾಜಿ ಶಾಸಕ ಅಪ್ಪಾಜಿಗೌಡರಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ
ಇಂದು ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಪ್ಪಾಜಿಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಬೆಂಗಳೂರಿನ ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅಪ್ಪಾಜಿಗೌಡ, ಈ ಹಿಂದೆ ತಾನು ಸೈಟ್ ಮಾರಿದ್ದೆ. ಆ ಹಣವನ್ನ ವಾಪಸ್​ ತರಿಸಿಕೊಳ್ಳುತ್ತಿರೋದಾಗಿ ಹೇಳಿದ್ದರು.

ಇದನ್ನೂ ಓದಿ:ಕಾರಿನ​ ಸ್ಟೆಪ್ನಿಯಲ್ಲಿ ಸಾಗಿಸ್ತಿದ್ದ 2.9 ಕೋಟಿ ಅಕ್ರಮ‌ ಹಣ ಸೀಜ್..!​


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv