ಸಾಲಮನ್ನಾ ಮಾಡಲು ಇನ್ನೂ ಒಂದು ವರ್ಷ ಕಾಯಬೇಕು-ಜೆಡಿಎಸ್​ ಮುಖಂಡ

ಹಾವೇರಿ: ರಾಜ್ಯದಲ್ಲಿ ರೈತರ ಹಿತಕಾಯಲು ಹಲವು ಯೋಜನೆಗಳನ್ನು ರೂಪಿಸಬೇಕಾಗಿದ್ದು, ರೈತರ ಸಾಲಮನ್ನಾ ಮಾಡಲು ಇನ್ನೂ ಒಂದು ವರ್ಷ ಸಮಯ ಬೇಕು ಅಂತಾ ಜೆಡಿಎಸ್ ಮುಖಂಡ ಎನ್.ಹೆಚ್.ಕೋನರೆಡ್ಡಿ ಹೇಳಿದ್ದಾರೆ.
ಹಾವೇರಿಯಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಉತ್ತರಕರ್ನಾಟಕ ಭಾಗದಲ್ಲಿ ಜೆಡಿಎಸ್​ಗೆ ಹೆಚ್ಚಿನ ಒಲವು ಸಿಕ್ಕಿಲ್ಲ. ನಾವು ನಿರೀಕ್ಷಿಸಿದಷ್ಟು ಸ್ಥಾನಗಳು ನಮಗೆ ಲಭಿಸಿಲ್ಲ . ಆದರೂ, ಜೆಡಿಎಸ್ ರೈತರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಸಿಎಂ ಕುಮಾರಸ್ವಾಮಿ ಸಾಲಮನ್ನಾ ಮಾಡೇ ಮಾಡುತ್ತಾರೆ ಎಂದು ಕೋನರೆಡ್ಡಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv