ಆಪರೇಷನ್ ಕಮಲ ಆಮಿಷ; ಸಾಕ್ಷ್ಯಾಧಾರಗಳಿಲ್ಲ ಅಂತಾ ಐಟಿ ಸ್ಪಷ್ಟನೆ

ಬೆಂಗಳೂರು: ಆಪರೇಷನ್ ಕಮಲ ಸಂಬಂಧ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡಿದೆ ಎಂದು ಆರೋಪಿಸಿ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ರು. ಈ ದೂರಿಗೆ ಸಂಬಂಧಿಸಿದಂತೆ ಕೊನೆಗೂ‌ ಸ್ಪಷ್ಟನೆ ನೀಡಿರುವ ಐಟಿ ಇಲಾಖೆಯ ಮುಖ್ಯಸ್ಥ ಬಾಲಕೃಷ್ಣನ್, ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಅಂತಾ ತಿಳಿಸಿದ್ದಾರೆ. ಈ ಕುರಿತಂತೆ ಪತ್ರದ ಮೂಲಕ‌ ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆಪರೇಷನ್ ಕಮಲ ಸಂಬಂಧ ಕಾಂಗ್ರೆಸ್​ ಪಕ್ಷದ ಶಾಸಕ ಸಿ.ಎಸ್ ಶಿವಳ್ಳಿ, ಬಿಸಿ ಪಾಟೀಲ್ ಮತ್ತು ಅನಿಲ್ ಚಿಕ್ಕಮಾದುಗೆ ಬಿಜೆಪಿ ನಾಯಕರು ಹಣದ ಆಮಿಷವೊಡ್ಡಿದ್ದಾರೆ ಎಂದು ದಿನೇಶ್‌ ಗುಂಡೂರಾವ್ ದೂರು ನೀಡಿದ್ರು.