ಶೂಟಿಂಗ್​ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಸೌರಭ್​ ಚೌಧರಿ

ಜರ್ಮನಿ: ಭಾರತದ ಸ್ಟಾರ್​ ಶೂಟರ್​ ಸೌರಭ್​ ಚೌಧರಿ 2019ರ ಐಎಸ್​ಎಸ್​ಎಫ್​ ವಿಶ್ವ ಕಪ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. ಜರ್ಮನಿಯಲ್ಲಿ ನಡೆಯುತ್ತಿರುವ 2019ರ ​ಎಸ್​ಎಫ್​ ವಿಶ್ವ ಕಪ್​ನಲ್ಲಿ ಏರ್​ ರೈಫಲ್​ ಇವೆಂಟ್​ನಲ್ಲಿ​ ಈ ಸಾಧನೆ ಮಾಡಿದ್ದಾರೆ. 17 ವರ್ಷದ ಸೌರಭ್​ ಚೌಧರಿ 10 ಮೀಟರ್​ ಏರ್​ ರೈಫಲ್ ಶೂಟಿಂಗ್​ನಲ್ಲಿ ರಷ್ಯಾದ ​ಚೆರ್ನೆಸೋವ್​ ಆರ್ಟೆಮ್​ ವಿರುದ್ಧ ಜಯ ಗಳಿಸಿ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ.

ರಷ್ಯಾದ ಚೆರ್ನೆಸೋವ್​ 243 ಅಂಕ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಸೌರಭ್​ ಚೌಧರಿ 246.3 ಅಂಕ ಪಡೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ಇಲ್ಲಿವರೆಗೆ ರೈಫಲ್​ ಶೂಟಿಂಗ್​ನಲ್ಲಿ ಸೌರಭ್ 245 ಅಂಕ ಪಡೆದಿದ್ದು, ವಿಶ್ವದಲ್ಲಿ ದಾಖಲೆಯಾಗಿ ಉಳಿದಿತ್ತು. ಈಗ 246.3 ಅಂಕ ಪಡೆಯುವ ಮೂಲಕ ತಮ್ಮ ದಾಖಲೆಯನ್ನ ತಾವೇ ಮುರಿದಿದ್ದಾರೆ. ಸೌರಭ್ ಇದಕ್ಕೂ ಮೊದಲು ದೆಹಲಿಯಲ್ಲಿ ನಡೆದ ವಿಶ್ವಕಪ್​ನಲ್ಲೂ ಚಿನ್ನ ಗೆದ್ದಿದ್ದರು. ಈಗ ಮತ್ತೆ 2ನೇ ಬಾರಿ ಈ ಸಾಧನೆ ಮಾಡಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv