ISI ವಿರುದ್ಧ ಕೆಮ್ಮಂಗಿಲ್ಲ, ಉಗ್ರಸ್ಥಾನದ ಹೈಕೋರ್ಟ್​ ಜಡ್ಜ್​ ಡಿಸ್ಮಿಸ್..!

ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ​ನೇತೃತ್ವದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದ ತರುವಾಯ ಪಾಕಿಸ್ತಾನದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಭಾರತವೂ ಸೇರಿದಂತೆ ಹಲವು ಜನ ಕಲ್ಪನಾ ಲೋಕದಲ್ಲಿ ವಿಹರಿಸ್ತಾ ಇದ್ದರು. ಆತ ನಮ್ಮ ಪ್ರಧಾನಿ ವಿರುದ್ಧ ಟೀಕೆ ಮಾಡಿದಾಗಲೂ ಶಂಖದಿಂದ ಬಂದ ತೀರ್ಥವೆಂಬಂತೆ ಇಲ್ಲಿ ಹಲವರು ಸ್ವೀಕರಿಸಿದ್ದರು. ಆದ್ರೆ, ಕಲ್ಪನಾ ಲೋಕದ ಬಲೂನ್ ಈಗ ಬ್ಲಾಸ್ಟ್​ ಆಗಿದ್ದು, ಪಾಕಿಸ್ತಾನದ ಬಾಸ್​ ಅಲ್ಲಿನ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆ ಐಎಸ್​ಐ ಎಂಬುದು ಪ್ರೂವ್ ಆಗುವಂಥ ಘಟನೆ ನಡೆದಿದೆ.
 ಸರ್ಕಾರ ಯಾವುದೇ ಬಂದರೂ ಪಾಕ್​ನಲ್ಲಿ ಎಲ್ಲವೂ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಹಾಗೂ ಸೇನೆ ಅಧೀನದಲ್ಲೇ ನಡೆಯುತ್ತದೆ ಎಂಬುದಷ್ಟೇ ಅಲ್ಲ, ಅಲ್ಲೀಗ ನ್ಯಾಯಾಂಗ ವ್ಯವಸ್ಥೆಯೂ ಸಹ ಐಎಸ್​ಐ ಆಣತಿಯಂತೆ ನಡೆಯುತ್ತದೆ ಎಂಬುದಕ್ಕೆ ನಿದರ್ಶನವೊಂದು ಸಿಕ್ಕಿದೆ.
ಏನಾಯಿತೆಂದರೆ ಹೈಕೋರ್ಟ್​ ಜಡ್ಜ್​ (IHC) ಅಜೀಜ್ ಸಿದ್ದಿಕಿ, ನ್ಯಾಯಾಂಗದಲ್ಲಿ ಐಎಸ್​ಐ ಮೂಗುತೂರಿಸುವುದು ಜಾಸ್ತಿಯಾಗಿದೆ ಎಂದು ಗದರಿಕೊಂಡಿದ್ದಕ್ಕೆ ISI ಕೆಂಡಾಮಂಡಲ ಆಗಿದೆ. ‘ಉದ್ಧಟತನ’ ತೋರಿದ ಆ ಜಡ್ಜ್ಅನ್ನು ತಕ್ಷಣ ಕೆಲಸದಿಂದ ಕಿತ್ತುಹಾಕುವಂತೆ ಸುಪ್ರೀಂ ಜ್ಯುಡಿಷಿಯಲ್​ ಕೌನ್ಸಿಲ್​ಗೆ (SJC) ಸೂಚನೆ ನೀಡಿದೆ. ಅದರಂತೆ, ಹೈಕೋರ್ಟ್​ನ ಹಿರಿಯ​ ಜಡ್ಜ್ ಅಜೀಜ್​ ಸಿದ್ದಿಕಿ ಅವರನ್ನು SJC ಇಂದು ಕೆಲಸದಿಂದ ತೆಗೆದುಹಾಕಿ, ಆದೇಶ ಹೊರಡಿಸಿದೆ. ಕಾನೂನು ಸಚಿವ ಡಾ. ಫರೋಗ್​ ನಸೀಂ ಸಹ ಈ ನಿಟ್ಟಿನಲ್ಲಿ ಜಡ್ಜ್ ಅಜೀಜ್​ ನೇಮಕವನ್ನು ಡಿನೋಟಿಫೈ ಮಾಡಿದ್ದಾರೆ.
ಜುಲೈ 21ರಂದು ರಾವಲ್ಪಿಂಡಿಯ ಬಾರ್​ ಅಸೋಸಿಯೇಷನ್​​ನಲ್ಲಿ ಭಾಷಣ ಮಾಡಿದ ಜಡ್ಜ್ ಅಜೀಜ್, ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಿಲ್ಲ. ಅವರು ಹಾಗೆ ಮಾತನಾಡಿರುವುದು ಮಿಸ್​ಕಂಡಕ್ಟ್​ ಆಗುತ್ತದೆ. ಹಾಗಾಗಿ ಅವರನ್ನು ಕೆಲಸದಿಂದ ತೆಗೆದುಹಾಕಬಹುದು ಎಂದು SJC ಮುಖ್ಯಸ್ಥರೂ ಆದ, ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಮಿಯಾನ್​ ಸಾಖಿಬ್ ನಿಸಾರ್​​​ ತಮ್ಮ ಆದೇಶದಲ್ಲಿ ವ್ಯಾಖ್ಯಾನಿಸಿದ್ದಾರೆ.
ಪಾಕ್​ನ 70 ವರ್ಷಗಳ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಡ್ಜ್​​ಗಳ ಬಗ್ಗೆ ಹೀಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವುದು ಇದು ಐದನೆಯ ಬಾರಿಯಾಗಿದೆ.
ಆದ್ರೆ ಜಡ್ಜ್ ಅಜೀಜ್ ಅವ್ರು ಈ ಆರೋಪವನ್ನು ಅಲ್ಲಗಳೆದಿದ್ದು ತಾವು ಅಂತಹ ಯಾವುದೇ ಮಿಸ್​ಕಂಡಕ್ಟ್​ ಮಾಡಿಲ್ಲ ಎಂದಿದ್ದಾರೆ. ಜತೆಗೆ, ತಮ್ಮನ್ನು ಕೆಲಸದಿಂದ ತೆಗೆದುಹಾಕಿರುವುದರ ವಿರುದ್ಧ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕವಾಗಿ ಪ್ರಶ್ನಿಸುವುದಾಗಿ ಘೋಷಿಸಿದ್ದಾರೆ.

ಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv