ಕಾಂಗರೂ ಬೇಟೆಗೆ ಸಜ್ಜಾಗುತ್ತಿದ್ದಾರೆ ಇಶಾಂತ್​​ ಶರ್ಮಾ..!

ಇಂಗ್ಲೆಂಡ್​ ಪ್ರವಾಸದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಟೀಮ್​ ಇಂಡಿಯಾ ವೇಗಿ ಇಶಾಂತ್​ ಶರ್ಮಾ, ಕಮ್​ ಬ್ಯಾಕ್​ ಮಾಡುವುದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದ ದೆಹಲಿ ವೇಗಿ, ವೆಸ್ಟ್​ಇಂಡೀಸ್​ ವಿರುದ್ಧದ ಟೆಸ್ಟ್​​ ಸರಣಿಯಿಂದ ಹೊರಗುಳಿದಿದ್ರು. ಸದ್ಯ ಸಂಪೂರ್ಣ ಗುಣಮುಖರಾಗಿದ್ದು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಟೆಸ್ಟ್​ ಮಾದರಿಯಲ್ಲಿ ಟೀಮ್​ ಇಂಡಿಯಾದ ಫ್ರೆಂಟ್​ ಲೈನ್​ ಬೌಲರ್​ ಆಗಿರುವ ಇಶಾಂತ್​ ಶರ್ಮಾ, ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಭರ್ಜರಿ ಕಮಾಲ್​ ಮಾಡಿದ್ರು. ಬೌನ್ಸಿ ಪಿಚ್​​ನಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸಿದ್ದ ದೆಹಲಿ ವೇಗಿ, 5 ಪಂದ್ಯಗಳ 9 ಇನಿಂಗ್ಸ್​​ಗಳಲ್ಲಿ 18 ವಿಕೆಟ್​ ಪಡೆಯುವ ಮೂಲಕ ಭಾರತದ ಪರ ಟಾಪ್​ ವಿಕೆಟ್​ ಟೇಕರ್​ ಆಗಿದ್ದರು. ಇನ್ನು ಇದೇ ನವೆಂಬರ್​​ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ, ಆತಿಥೇಯರ ವಿರುದ್ಧ 4 ಟೆಸ್ಟ್​​ ಪಂದ್ಯಗಳನ್ನಾಡಲಿದ್ದು ವೇಗಿ ಇಶಾಂತ್​, ತಂಡದ ಪರ ಪ್ರಮುಖ ಅಸ್ತ್ರವಾಗಿದ್ದಾರೆ. ಹೀಗಾಗಿ ಜಿಮ್​​ನಲ್ಲಿ ಭರ್ಜರಿ ತಯಾರಿ ನಡೆಸಿರುವ ಇಶಾಂತ್​​, ಕಾಂಗರೂಗಳನ್ನ ಬೇಟೆಯಾಡೋದಕ್ಕೆ ತಯಾರಿ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv