ರಂಜನ್ ಕಪೂರ್ ಜೊತೆ ಕೆ.ಎಲ್ ರಾಹುಲ್ ಡೇಟಿಂಗ್..?

ಒಂದು ಕಡೆ ಟೀಂ ಇಂಡಿಯಾ ಏಕದಿನ ವಿಶ್ವಕಪ್​ಗಾಗಿ ಸಿದ್ಧತೆ ನಡೆಸುತ್ತಿದೆ.ಮತ್ತೊಂದೆಡೆ ತಂಡದ ಕ್ಲಾಸ್ ಬ್ಯಾಟ್ಸ್​​ಮನ್ ಕೆ.ಎಲ್ ರಾಹುಲ್​ ಬಗ್ಗೆ ಹೊಸ ಗಾಸಿಪ್​ ಹುಟ್ಟಿಕೊಂಡಿದೆ.ಬಾಲಿವುಡ್​ ನಟಿಯೊಂದಿಗೆ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋದೇ ಆ ಗಾಸಿಪ್​.ಬಾಲಿವುಡ್ ಹಿರೋಯಿನ್ ಆಕಾಂಕ್ಷ ರಂಜನ್ ಕಪೂರ್ ಜೊತೆ ರಾಹುಲ್ ಸುತ್ತಾಟ ನಡೆಸಿದ್ದಾರೆ, ಅನ್ನೋ ಸುದ್ದಿ ಬಾಲಿವುಡ್ ಹಾಗು ಕ್ರಿಕೆಟ್ ಲೋಕದಲ್ಲಿ ಹರಿದಾಡ್ತಿದೆ.ರಂಜನ್ ಕಪೂರ್,ರಾಹುಲ್ ಒಟ್ಟಾಗಿರುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಪೋಟೋವನ್ನ ರಂಜನ್ ಕಪೂರ್ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.ಅಂದಹಾಗೇ,ರಾಹುಲ್ ಹೆಸರು ಈ ಹಿಂದೆ ನಿಧಿ ಅಗರ್​ವಾಲ್ ಅನ್ನೋ ನಟಿಯೊಂದಿಗೆ ತಳಕು ಹಾಕಿಕೊಂಡಿತ್ತು.ರಾಹುಲ್ ಹಾಗು ನಿಧಿ  ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ರು.ಇವರಿಬ್ಬರು ಜೊತೆಯಾಗಿರುವ ಪೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ವು.ಸದ್ಯ, ರಾಹುಲ್ ಇಂಗ್ಲೆಂಡ್​ನಲ್ಲಿದ್ದು ವಿಶ್ವಕಪ್ ಟೂರ್ನಿ ಆಡಲು ರೆಡಿಯಾಗುತ್ತಿದ್ದಾರೆ.ನಿನ್ನೆ ನಡೆದ ಟೀಂ ಇಂಡಿಯಾದ ಎರಡನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv