ತನ್ನದೇ ಪಕ್ಷದ ಅಭ್ಯರ್ಥಿ ಸೋಲಿಸಲು ಹೆಚ್​.ಡಿ ಕುಮಾರಸ್ವಾಮಿ ಪ್ಲಾನ್..?!! #ViralAudio

ಬೆಂಗಳೂರು: ಎಲೆಕ್ಷನ್​ಗೆ ಇನ್ನು 4 ದಿನ ಬಾಕಿ ಇರುವಾಗಲೇ ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.​ಡಿ ಕುಮಾರಸ್ವಾಮಿ ತನ್ನದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಮುಂದಾಗಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕುಮಾರ ಸ್ವಾಮಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಖತ್ ವೈರಲ್ ಆಗ್ತಿದೆ. ನಾಮಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದ ವೇಳೆ ಕುಮಾರಣ್ಣ ಮಾತನಾಡಿದ್ದಾರೆ ಎನ್ನೋ ಆಡಿಯೋ ಇದಾಗಿದೆ.

ಟಿಕೆಟ್​​ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ಅಭ್ಯರ್ಥಿ ವಿರುದ್ಧವೇ ಕುಮಾರಸ್ವಾಮಿ ಸಿಟ್ಟಾಗಿದ್ದು, ಅವರನ್ನು ಹೇಗಾದರೂ ಮಾಡಿ ಸೋಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಆಡಿಯೋವೊಂದು ಸಿಕ್ಕಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ರಾಜಣ್ಣ ಅವರ ಸಂಬಂಧಿಯೊಬ್ಬರೊಂದಿಗೆ ಕುಮಾರಸ್ವಾಮಿ ಮಾತನಾಡಿರುವುದು ಎನ್ನಲಾದ ಆಡಿಯೋ ಇದಾಗಿದೆ. ಶಿಡ್ಲಘಟ್ಟದ ಜೆಡಿಎಸ್​​ ಅಭ್ಯರ್ಥಿ ಮೇಲೂರು ರವಿಯನ್ನು ಸೋಲಿಸಲು ಹೆಚ್​ಡಿಕೆ ಪಣ ತೊಟ್ಟಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. 

10 ಕೋಟಿ ಆದ್ರೂ ಖರ್ಚು ಮಾಡ್ತೀನಿ, ರಾಜಣ್ಣ ಗೆಲ್ಲಬೇಕು. ನನಗೆ ನೋವು ಮಾಡಿ ಟಿಕೆಟ್​​ ಪಡೆದಿದ್ದಾರೆ. ನನಗೆ ಗೌರವ ಕೊಟ್ಟಿಲ್ಲ ಎಂದು ಫೋನ್​ ಸಂಭಾಷಣೆಯಲ್ಲಿ ಹೆಚ್​ಡಿಕೆ ಹೇಳಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲೇನಿದೆ?
ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ಅರ್ಜಿ ಹಾಕಲೇಬೇಕು. ಹತ್ತು ಕೋಟಿ ಆಗ್ಲಿ ನಾನು ಖರ್ಚು ಮಾಡ್ತೀನಿ.  ಜನರ ಮುಂದೆ ಹೋಗಿ ನಾನು ಕುಮಾರಣ್ಣನ ಅಭ್ಯರ್ಥಿ ಎಂದು ಹೇಳಬೇಕು. ಕುಮಾರಣ್ಣನಿಗೆ ನೋವು ಕೊಟ್ಟು ಟಿಕೆಟ್​ ತಂದಿದ್ದಾರೆ. ಹಣ ಕೊಟ್ಟರೋ ಏನು ಮಾಡಿದ್ರೋ ಗೊತ್ತಿಲ್ಲ. ನಾನು ಕುಮಾರಣ್ಣನ ಕ್ಯಾಂಡಿಡೇಟ್​, ಕುಮಾರಣ್ಣ ಈ ರಾಜ್ಯದಲ್ಲಿ ಉಳಿಯಬೇಕಾದ್ರೆ ಶಿಡ್ಲಘಟ್ಟ ಜನ ನನಗೆ ವೋಟ್​ ಹಾಕಿ ಎನ್ನಲಿ ಎಂದು ಆಡಿಯೋದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ರಾಜಣ್ಣನಿಗೆ ಟಿಕೆಟ್​ ತಪ್ಪಿಸಿರೋದು ನನಗೆ ನೋವಾಗಿದೆ. ರವಿ ಬಗ್ಗೆ ನನಗೆ ಕಿಂಚಿತ್ತು ಗೌರವವೂ ಇಲ್ಲ. ಅವನು ನನ್ನ ಹತ್ತಿರ ಬಂದೂ ಇಲ್ಲ. ತಾನೇ ತೊಡೆ ತಟ್ಟಿಕೊಂಡು ಅವನು ಹೋಗಿರುವಾಗ ಅವನು ಗೆಲ್ಲೋದ್ರಿಂದ ನನಗೇನೂ ಉಪಯೋಗ ಬರಲ್ಲ. ನೀವು ರವಿಯನ್ನ ಗೆಲ್ಲಿಸಿಕೊಂಡು ಬಂದ್ರೆ ಅವನೇನು ನನ್ನ ಪರವಾಗಿ ನಿಂತುಕೊಳಲ್ಲ. ನಾನು ಶಿಡ್ಲಘಟ್ಟಕ್ಕೆ ಎಂಟರ್​ ಆಗಲ್ಲ. ಕುಮಾರಣ್ಣನಿಗೆ ಕಣ್ಣೀರು ಹಾಕಿಸಿ ದೇವೇಗೌಡರ ಹತ್ತಿರ ಸೀಟ್​ ತಂದಿದ್ದಾರೆ. ಕುಮಾರಣ್ಣ ಉಳಿಯಬೇಕು ಅಂದ್ರೆ ವೋಟ್​ ಹಾಕಿ, ಕುಮಾರಣ್ಣ ನಿರ್ನಾಮ ಆಗಬೇಕು ಅಂದ್ರೆ ವೋಟ್​ ಹಾಕಬೇಡಿ ಅಂತ ಹೇಳಿಕೊಂಡು ಜನರ ಬಳಿ ಹೋಗಿ. ನಾನು ರವಿ ಪರವಾಗಿ ಯಾವುದೇ ಕಾರಣಕ್ಕೂ ಬರಲ್ಲ ಎಂದು ಹೇಳೊದನ್ನ ಆಡಿಯೋದಲ್ಲಿ ಕೇಳಬಹುದು.

ನಿಜಕ್ಕೂ ಕುಮಾರಸ್ವಾಮಿ ಹೀಗೆ ಹೇಳಿದ್ರಾ?!

ಜೆಡಿಎಸ್​ನವರು ಹಣ ಪಡೆದು ಟಿಕೆಟ್ ನೀಡಿದ್ರು ಅಂತಾ ಹೇಳು ಅಂತಾ ಹೆಚ್​ಡಿಕೆ ಹೇಳಿದ್ಯಾಕೆ? ನಿಜಕ್ಕೂ ಕುಮಾರಸ್ವಾಮಿ ಹೀಗೆ ಹೇಳಿದ್ರಾ?!ಹೆಚ್ಚಿನ ಡಿಟೇಲ್ಸ್​ಗೆ ಕ್ಲಿಕ್ ಮಾಡಿ:1. http://firstnews.tv/jds-party-tickets-are-sold-for-money-whats-hdk-says/2. http://firstnews.tv/is-hdk-trying-to-make-his-own-party-candidate-lose-election/61/

Posted by FirstNews Kannada on Monday, May 7, 2018

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv