ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವೇಗಿ ಡೇಲ್ ಸ್ಟೇನ್ ಎಂಟ್ರಿ..?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-12, ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಪಾಯಿಂಟ್ ಟೇಬಲ್​ನಲ್ಲಿ ಟಾಪ್ 4 ಸ್ಥಾನಕ್ಕೇರಲು, ಪ್ರತಿಯೊಂದು ತಂಡವೂ ತೀವ್ರ ಹೋರಾಟ ನಡೆಸುತ್ತಿದೆ. ಹೀಗಾಗಿ ಒಂದೊಂದು ಪಂದ್ಯವೂ, ಮಹತ್ವ ಪಡೆದುಕೊಂಡಿದೆ. ಮತ್ತೊಂದೆಡೆ ಆಟಗಾರರ ಇಂಜುರಿ ಸಮಸ್ಯೆ, ಕೆಲ ಫ್ರಾಂಚೈಸಿಗಳ ನಿದ್ದೆಕೆಡಿಸಿದೆ. ಹೀಗಾಗಿ ಬದಲಿ ಆಟಗಾರರ ಹುಡುಕೋ ಪ್ರಯತ್ನ, ಫ್ರಾಂಚೈಸಿಗಳು ನಡೆಸುತ್ತಿವೆ. ಲೇಟೆಸ್ಟ್ ವಿಷ್ಯ ಏನಪ್ಪ ಅಂದ್ರೆ, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್ ಆದ ಆಟಗಾರ, ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇನ್ ಐಪಿಎಲ್ ಫ್ರಾಂಚೈಸಿ ಸೇರ್ಪಡೆಯಾಗುತ್ತಿದ್ದಾರೆ ಅನ್ನೋದು. ಆದ್ರೆ ಯಾವ ಫ್ರಾಂಚೈಸಿ ಅಂತ, ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಡೇಲ್ ಸ್ಟೇನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಆರ್​ಸಿಬಿಗೆ ಮಾತ್ರ ವಿದೇಶಿ ಆಟಗಾರನ ಅವಶ್ಯಕತೆ ಇದೆ. ಯಾಕಂದ್ರೆ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ನಾಥನ್ ಕೌಲ್ಟರ್​-ನೈಲ್, ಇನ್ನೂ ಆರ್​ಸಿಬಿ ತಂಡ ಸೇಪರ್ಡೆಯಾಗಿಲ್ಲ. ಹೀಗಾಗಿ ಸ್ಟೇನ್, ಕೌಲ್ಟರ್​-ನೈಲ್​ರನ್ನ ರೀಪ್ಲೇಸ್ ಮಾಡ್ತಿದ್ದಾರೆ ಅಂತ ಕೇಳಿಬರುತ್ತಿದೆ. ಮತ್ತೊಂದು ಮೂಲದ ಪ್ರಕಾರ,  ಐಪಿಎಲ್ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್, ಸ್ಟೇನ್​ರನ್ನ ಡಗೌಟ್ ಶೋ ಅನ್ನೋ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದೆ ಅಂತಾನೂ ಕೇಳಿಬರುತ್ತಿದೆ. ಆದ್ರೆ ಯಾವುದೂ ಇನ್ನೂ ಕನ್ಫರ್ಮ್​ ಆಗಲಿಲ್ಲ. ಏನೇ ಆಗಲಿ, ಡೇಲ್ ಸ್ಟೇನ್ ಆರ್​ಸಿಬಿ ಸೇರ್ತಿದ್ದಾರಾ ಇಲ್ವಾ ಅನ್ನೋದು ಒಂದೆರೆಡು ದಿನಗಳಲ್ಲಿ ಗೊತ್ತಾಗಲಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv