ಐಪಿಎಲ್​ನಲ್ಲಿ ಯುವರಾಜ್ ಮೂಲ ಬೆಲೆ ಇಳಿಕೆಯಾಗಿದ್ದೇಕೆ….?

ಐಪಿಎಲ್ 12ನೇ ಆವೃತ್ತಿಗಾಗಿ ಭಾರತದ ಆಟಗಾರರ ಮೂಲ ಬೆಲೆ ಬಿಡುಗಡೆಗೊಳಿಸಲಾಗಿದೆ. ಐಪಿಎಲ್​ ಇತಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ದಾಖಲೆ ಹೊಂದಿದ್ದ ಯುವರಾಜ್ ಸಿಂಗ್ ಬೆಲೆ ಪಾತಾಳಕ್ಕೆ ಕುಸಿದಿದೆ. ಯುವರಾಜ್​ಗೆ ಕೇವಲ 1 ಕೋಟಿ ನಿಗದಿಪಡಿಸಲಾಗಿದೆ. ಕಳೆದ ಬಾರಿ ಕಿಂಗ್ಸ್ ಇಲೆವನ್ ಪಂಜಾಬ್​ ಪರ ಆಡಿದ್ದ ಯುವರಾಜ್ ಸಂಪೂರ್ಣ ವಿಫಲರಾಗಿದ್ರು. ಇದರಿಂದ ಈ ಬಾರಿ ಪಂಜಾಬ್​ ತಂಡದಿಂದ ಯುವರಾಜ್​ರನ್ನ ಬಿಡುಗಡೆಗೊಳಿಸಲಾಗಿದೆ.
ಇನ್ನೂ ಕಳೆದ ಬಾರಿ ಅತ್ಯಧಿಕ 11. 5 ಕೋಟಿಗೆ ರಾಜಸ್ಥಾನ್​ ರಾಯಲ್ಸ್ ತಂಡಕ್ಕೆ ಖರೀದಿಯಾಗಿದ್ದ ಎಡಗೈ ವೇಗಿ ಜಯದೇವ್ ಉನಾದ್ಕಟ್​ ಈಗಿನ ಬೆಲೆ 1.5 ಕೋಟಿ. ಡೆಲ್ಲಿ ಎಕ್ಸ್​ಪ್ರೆಸ್​ ಇಶಾಂತ್ ಶರ್ಮಾ 75 ಲಕ್ಷಕ್ಕೆ ಸೇಲ್​ಗಿದ್ದಾರೆ. ಇದೆ ತಿಂಗಳು 18 ರಂದು ರಾಜಸ್ಥಾನದ ಜೈಪುರ್​ನಲ್ಲಿ ಐಪಿಎಲ್ 12ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ತಂಡಗಳ 74 ಸ್ಥಾನಗಳಿಗಾಗಿ 1003 ಆಟಗಾರರು ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ 232 ವಿದೇಶಿ ಆಟಗಾರರು ಸೇರಿದ್ದಾರೆ. ಅಲ್ಲದೇ ಇದೆ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ, ಹಾಗೂ ಬಿಹಾರ, ಉತ್ತರಖಾಂಡ  ಆಟಗಾರರು ಹರಾಜಿಗೊಳಪಡಲಿದ್ದಾರೆ.