ತಾಹಿರ್ ಸ್ಪಿನ್ ಮ್ಯಾಜಿಕ್​..!ಸೂಪರ್​ ಕಿಂಗ್ಸ್​ಗೆ 162 ರನ್​ ಟಾರ್ಗೆಟ್..!

ಕೋಲ್ಕತ್ತಾ: ಐಪಿಎಲ್ 29ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಚೆನ್ನೈ ಸೂಪರ್​ ಕಿಂಗ್ಸ್​​ಗೆ 162 ರನ್​ಗಳ ಗುರಿ ನೀಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​ ಪರ ಆರಂಭಿಕ ಆಟಗಾರ ಕ್ರಿಸ್​ ಲೈನ್​, ಬಿಟ್ಟು ಉಳಿದ ಬ್ಯಾಟ್ಸ್​​ಮನ್​ಗಳು ಅಬ್ಬರಿಸಲಿಲ್ಲ. ದೈತ್ಯ ಬ್ಯಾಟ್ಸ್​​​ಮನ್ ಆಂಡ್ರೆ ರಸೆಲ್​ ಕೂಡ ನಿರಾಸೆ ಮೂಡಿಸಿದ್ರು. ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ಲೈನ್, 51 ಎಸೆತಗಳಲ್ಲಿ  7 ಫೋರ್,​ 6 ಸಿಕ್ಸರ್ ಮೂಲಕ 82 ರನ್​ ಸಿಡಿಸಿದ್ರು.ಅಂತಿಮವಾಗಿ ಕೆಕೆಆರ್ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 161 ರನ್​ಕಲೆಹಾಕಿತು.ಚೆನ್ನೈ ಪರ ಸ್ಪಿನ್ನರ್ ಇಮ್ರಾನ್ ತಾಹಿರ್ 27 ರನ್​ಗೆ 4 ವಿಕೆಟ್​ ಪಡೆದು ಮಿಂಚಿದ್ರು.