ನಾಯಕತ್ವದಿಂದ ರಹಾನೆ ಕಿಕ್​ಔಟ್​..!ಸ್ಟೀವ್ ಸ್ಮಿತ್ ರಾಜಸ್ಥಾನ ರಾಯಲ್ಸ್ ಹೊಸ ಸಾರಥಿ..!

ಐಪಿಎಲ್​ನ ರಾಜಸ್ಥಾನ ರಾಯಲ್ಸ್ ತಂಡದ ನೂತನ ನಾಯಕನಾಗಿ, ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ.ನಾಯಕತ್ವದಿಂದ ಅಜಿಂಕ್ಯಾ ರಹಾನೆಗೆ ಆರ್​ಆರ್ ಮ್ಯಾನೇಜ್​ಮೆಂಟ್ ಕೊಕ್ ನೀಡಿದೆ. ಟೂರ್ನಿಯಲ್ಲಿ ರಾಯಲ್ಸ್ ಆಡಲಿರುವ ಉಳಿದ ಪಂದ್ಯಗಳಲ್ಲಿ ತಂಡವನ್ನ ಸ್ಮಿತ್ ಮುನ್ನಡೆಸಲಿದ್ದಾರೆ.ಈ ಬಾರಿಯ ಐಪಿಎಲ್​ನಲ್ಲಿ ರಹಾನೆ ನಾಯಕತ್ವದಲ್ಲಿ ಆರ್​ಆರ್​ ಕಳಪೆ ಪ್ರದರ್ಶನ ನೀಡಿದ್ದು, 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯಗಳಿಸಿದೆ.ಪಾಯಿಂಟ್​ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.ಕಠಿಣ ಸಂದರ್ಭದಲ್ಲು ರಹಾನೆ  ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದಾರೆ.ಆದ್ರೆ ನಾಯಕನಾಗಿ ಸ್ಮಿತ್ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವ​ರನ್ನ ಹೊಸ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಆರ್​ಆರ್ ಮೂಲಗಳು ತಿಳಿಸಿವೆ.ಸದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಿಂದಲೇ ಸ್ಮಿತ್​ ಆರ್​ಆರ್ ಸಾರಥ್ಯ ವಹಿಸಿದ್ದಾರೆ.