ಡೆಲ್ಲಿ ಹುಡುಗರ ವಿರುದ್ಧವಾದ್ರೂ, ಗೆಲ್ಲುತ್ತಾ ಆರ್​ಸಿಬಿ..?

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ ಸತತ 5 ಸೋಲು ಕಂಡಿರುವ ಆರ್​ಸಿಬಿ, ಇಂದು ತವರಿನ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಟ ನಡೆಸಲಿದೆ. ತವರಿನಲ್ಲಿ ಆಡಿದ ಎರಡು ಪಂದ್ಯ ಕೈ ಚೆಲ್ಲಿರುವ ಕೊಹ್ಲಿ ಪಡೆ, ಈ ಪಂದ್ಯ ಗೆದ್ದು ಸೋಲಿನ ಸುಳಿಯಿಂದ ಹೊರಬರುವ ವಿಶ್ವಾಸದಲ್ಲಿದೆ.ಆದ್ರೆ ಇದು ಸಾಧ್ಯವಾಗಬೇಕಾದ್ರೆ, ತಂಡದ ಬೌಲರ್ಸ್​ ಬೆಸ್ಟ್ ಪ್ರದರ್ಶನ ನೀಡಬೇಕು.ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 200 ರನ್​ಗಳಿಸಿದ್ರು,ಅದನ್ನ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಬೌಲರ್ಸ್ ವಿಫಲರಾಗಿದ್ರು.ಹೀಗಾಗಿ ಇಂದಿನ ಪಂದ್ಯದಲ್ಲಿ ಶಿಸ್ತು ಬದ್ಧ ದಾಳಿ ನಡೆಸುವುದರ ಮೂಲಕ,ಡೆಲ್ಲಿಯ ಬ್ಯಾಟ್ಸ್​​ಮನ್​ಗಳ ರನ್​ದಾಹಕ್ಕೆ ಬ್ರೇಕ್ ಹಾಕಬೇಕು.ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ ಕೆಕೆಆರ್ ವಿರುದ್ಧ  ನೀಡಿದ್ದ ಪ್ರದರ್ಶನವನ್ನೇ ಮುಂದುವರಿಸಬೇಕು.ಇತ್ತ ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ಗೆ ಶರಣಾಗಿದ್ದ ಡೆಲ್ಲಿ ಬಾಯ್ಸ್, ಇಂದಿನ ಪಂದ್ಯ ಗೆಲುವಿನ ಟ್ರ್ಯಾಕ್​ಗೆ ಮರಳುವ ಲೆಕ್ಕಾಚಾರದಲ್ಲಿದೆ.ಆದ್ರೆ ಅಯ್ಯರ್​ ಪಡೆ ಗೆಲವಿನ ಬಾವುಟ ಹಾರಿಸಬೇಕಾದ್ರೆ, ಯುವ ಬ್ಯಾಟಿಂಗ್​ನಲ್ಲಿ ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್​, ರಿಷಬ್ ಪಂತ್, ಶಿಖರ್ ಧವನ್ ಅಬ್ಬರಿಸಬೇಕು.ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡ, ಕ್ರಿಸ್ ಮಾರಿಸ್, ಯುವ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಸ್ಪಿನ್ ವರ್ಕೌಟ್ ಆಗಬೇಕು.

ಅಂಕಿಅಂಶಗಳು: ಆರ್​ಸಿಬಿ ಡೆಲ್ಲಿ ವಿರುದ್ಧ ಈವರೆಗು ಆಡಿರುವ 22 ಪಂದ್ಯಗಳಲ್ಲಿ 15 ರಲ್ಲಿ ಜಯಗಳಿಸಿದೆ.ಡೆಲ್ಲಿ ಕೇವಲ 6 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ರಾಯಲ್ ಚಾಲೆಂಜರ್ಸ್ ಅಂಕಿಅಂಶಗಳ ಬಲ ಇರುವುದರಿಂದ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಆಗಿದೆ.

ಪಂದ್ಯದ ಸಮಯ: ಸಂಜೆ 4 ಗಂಟೆ