ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ ಪ್ಲೇಯರ್ಸ್..!

ಬೆಂಗಳೂರು: ಈ ಬಾರಿಯ ಐಪಿಎಲ್​ನ 20ನೇ ಪಂದ್ಯದಲ್ಲಿ ಇಂದು ಬೆಂಗಳೂರು ರಾಯಲ್ ಚಾಲೆಂಜರ್ಸ್​- ಡೆಲ್ಲಿ ಕ್ಯಾಪಿಟಲ್ಸ್​​ ಸೆಣಸಾಡಲಿವೆ. ಈ ಪಂದ್ಯದಲ್ಲಿ ಆರ್​ಸಿಬಿ ಪ್ಲೇಯರ್ಸ್ ಗ್ರೀನ್​ ಜೆರ್ಸಿ ತೊಟ್ಟು ಅಂಗಳಕ್ಕಿಳಿಯಲಿದ್ದಾರೆ. ಪ್ಲಾಸ್ಟಿಕ್​ ವಸ್ತುಗಳ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರ್​ಸಿಬಿ ಆಟಗಾರರು ಗ್ರೀನ್ ಜೆರ್ಸಿ ಧರಿಸಿ ಆಡಲಿದ್ದಾರೆ. ಗೋ ಗ್ರೀನ್ ಅಭಿಯಾನದಡಿ ಹಿಂದಿನ ಹಲವು ಐಪಿಎಲ್ ಸೀಸನ್​ಗಳಲ್ಲೂ ಆರ್​ಸಿಬಿ ಆಟಗಾರರು ಗ್ರೀನ್ ಧರಿಸಿ ಆಡಿದ್ರು. ಆದ್ರೆ ಆರ್​ಸಿಬಿ ಗ್ರೀನ್ ಜೆರ್ಸಿಯಲ್ಲಿ ಆಡಿದಾಗ ಗೆಲುವುಗಿಂತ ಸೋಲು ಕಂಡಿದ್ದೆ ಹೆಚ್ಚು. ಈವರೆಗು ಆಡಿರುವ 8 ಪಂದ್ಯಗಳಲ್ಲಿ 5 ರಲ್ಲಿ ಆರ್​ಸಿಬಿ ಎದುರಾಳಿಗಳಿಗೆ ಶರಣಾಗಿದೆ. ಹೀಗಾಗಿ ಫ್ಯಾನ್ಸ್ ಇಂದಿನ ಪಂದ್ಯವನ್ನ ಆರ್​ಸಿಬಿ ಪ್ರಕೃತಿ ಮಾತೆಗೆ ಅರ್ಪಿಸಲಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.