ಟ್ವಿಟರ್​ನಲ್ಲೂ ಹೊಸ ದಾಖಲೆ ಬರೆದ ಐಪಿಎಲ್ 12..!

ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್​ ಐಪಿಎಲ್​ ವೇಳೆ ಕೇವಲ ಕ್ರಿಕೆಟ್​ ದಾಖಲೆಗಳು ಮಾತ್ರ ಅಲ್ಲ.ಸೋಷಿಯಲ್ ಮೀಡಿಯಾಗಳ ದಾಖಲೆಗಳು ಕೂಡ ಬ್ರೇಕ್ ಆಗುತ್ತವೆ.ಹೌದು, ಪ್ರತಿಯೊಂದು ಐಪಿಎಲ್​ ಸೀಸನ್​ನಲ್ಲಿ ಟ್ವಿಟರ್​ನಲ್ಲಿ ಟ್ವಿಟ್​, ರೀಟ್ವೀಟ್​ಗಳ ಸುರಿಮಳೆಯೇ ಆಗುತ್ತೆ.ಈ ಬಾರಿಯ ಐಪಿಎಲ್​ನಲ್ಲೂ 27 ಮಿಲಿಯನ್​ ಟ್ವಿಟ್​ಗಳು ದಾಖಲಾಗಿವೆ.ಈ ಮೂಲಕ ಐಪಿಎಲ್​ 12 ಹೊಸ ದಾಖಲೆ ಬರೆದಿದೆ.ಕಳೆದ ವರ್ಷಕ್ಕೆ ಹೋಲಿಸಿದ್ರೆ,ಈ ವರ್ಷ ಟ್ವಿಟರ್​​ನಲ್ಲಿ ಆಕ್ಟಿವ್ ಆಗಿದ್ದ ಐಪಿಎಲ್​ ಫ್ಯಾನ್ಸ್ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.ಒಟ್ಟಾರೆ ಶೇಕಡಾ 44 ರಷ್ಟು ಫ್ಯಾನ್ಸ್, ಐಪಿಎಲ್​ ಪಂದ್ಯಗಳ ಸಮಯದಲ್ಲಿ ಟ್ವಿಟ್​ ಮಾಡಿದ್ದಾರೆ.ಇನ್ನು,ಫ್ಯಾನ್ಸ್ ಅತಿಹೆಚ್ಚು ಟ್ವಿಟ್​ ಮಾಡಿದ ಆಟಗಾರರ ಪಟ್ಟಿಯಲ್ಲಿ ಸಿಎಸ್​ಕೆ ಕ್ಯಾಪ್ಟನ್ ಧೋನಿ ಮೊದಲ ಸ್ಥಾನದಲ್ಲಿದ್ರೆ, ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಎರಡನೇ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್​ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.ಇನ್ನು ತಂಡಗಳ ಪೈಕಿ ಚೆನ್ನೈ ನಂ.1ಸ್ಥಾನದಲ್ಲಿದೆ.ಆದರೆ ಫೈನಲ್ ಪಂದ್ಯದ ವೇಳೆ ಸಿಎಸ್​ಕೆಗಿಂತ ಮುಂಬೈ ಪರ ಹೆಚ್ಚು ಟ್ವಿಟ್​ಗಳು ದಾಖಲಾಗಿವೆ.ಮುಂಬೈ ಪರ ಶೇಕಡಾ 63ರಷ್ಟು ಟ್ವಿಟ್​ಗಳು ಹರಿದು ಬಂದ್ರೆ, ಚೆನ್ನೈ ಪರ 37ರಷ್ಟು ಟ್ವಿಟ್​ ದಾಖಲಾದ್ವು.ಈ ಪಟ್ಟಿಯಲ್ಲಿ ರಾಯಲ್​ ಚಾಲೆಂಜರ್ಸ್​ ನಾಲ್ಕನೇ ಸ್ಥಾನದಲ್ಲಿದೆ.ಹಾರ್ದಿಕ್ ಪಾಂಡ್ಯಾ ಧೋನಿಯನ್ನ ಗುಣಗಾನ ಮಾಡಿ ಪೋಸ್ಟ್ ಮಾಡಿದ್ದ ಟ್ವಿಟ್,​ ಈ ವರ್ಷದ ಗೋಲ್ಡ್ ಟ್ವಿಟ್ ಎನಿಸಿಕೊಂಡಿದೆ.ಈ ಎಲ್ಲಾ ಅಂಕಿಅಂಶಗಳನ್ನ ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.