ಮುಂಬೈ ಇಂಡಿಯನ್ಸ್​ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಆರ್​ಸಿಬಿ..?

ಮುಂಬೈ: ಐಪಿಎಲ್​ ಟೂರ್ನಿಯಲ್ಲಿ ಇಂದು ಮುಂಬೈ ಇಂಡಿಯನ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈಟ್​ ನಡೆಸಲಿವೆ. ಕಳೆದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧ ಗೆದ್ದು ಆರ್​ಸಿಬಿ ಸೋಲಿನ ಸುಳಿಯಿಂದ ಹೊರಬಂದಿದೆ.ಹೀಗಾಗಿ ಇಂದಿನ ಪಂದ್ಯದಲ್ಲೂ ಗೆಲುವಿನ ಬಾವುಟ ಹಾರಿಸುವ ವಿಶ್ವಾಸದಲ್ಲಿದೆ.ಈಗಾಗಲೇ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿರುವ ವಿರಾಟ್​ ಕೊಹ್ಲಿ ಪಡೆ ಈ ಪಂದ್ಯ ಗೆದ್ದು ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬೌಲರ್ಸ್​ ದುಬಾರಿಯಾಗಿದ್ರು.ಆದ್ರೆ ಕ್ಯಾಪ್ಟನ್ ಕೊಹ್ಲಿ, ಎಬಿ ಡಿವಿಲಿಯರ್ಸ್​ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ರು.ಈ ಪಂದ್ಯದಲ್ಲೂ ಇವರಿಬ್ಬರು ಅದೇ ಪ್ರದರ್ಶನ ಮುಂದುವರಿಸಬೇಕಿದೆ.ಇನ್ನು ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಕೂಡ ಗೆಲುವಿನ ಟ್ರ್ಯಾಕ್​ಗೆ ಮರಳುವ ಲೆಕ್ಕಾಚಾರದಲ್ಲಿದೆ.