ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯೋಕೆ ದಿನೇಶ್ ಕಾರ್ತಿಕ್ ಹೀಗಾ ಮಾಡೋದು..?

ಕೋಲ್ಕತ್ತಾ ನೈಟ್​ರೈಡರ್ಸ್ ತಂಡದ ಕ್ಯಾಪ್ಟನ್ ದಿನೇಶ್​ ಕಾರ್ತಿಕ್​ ವಿರುದ್ಧ ಮನೋಜ್ ತಿವಾರಿ ಫುಲ್ ಗರಂ ಆಗಿದ್ದಾರೆ. ಕೆಕೆಆರ್​ ತಂಡದ ಪರ ಆಡುತ್ತಿರುವ ಯುವ ಬ್ಯಾಟ್ಸ್​​​ಮನ್ ಶುಭ್​ಮನ್​ ಗಿಲ್, ಬ್ಯಾಟಿಂಗ್ ಆರ್ಡರ್​ ವಿಷಯದಲ್ಲಿ ತಿವಾರಿ ಕಾರ್ತಿಕ್​ರನ್ನ ಪ್ರಶ್ನಿಸಿದ್ದಾರೆ. ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್​ರನ್ನ 7ನೇ ಕ್ರಮಾಂಕದಲ್ಲಿ ಆಡಿಸಿದ್ದನ್ನ ಖಂಡಿಸಿದ್ದಾರೆ.ದಿನೇಶ್ ಕಾರ್ತಿಕ್ ನಾಳೆ ವಿಶ್ವಕಪ್ ತಂಡದ ಆಯ್ಕೆ ಇರೋದ್ರಿಂದ ಗಿಲ್​ಗಿಂತ ಮೊದಲು ಆಡಿದ್ದಾರೆ.ಇದನ್ನ ಯಾರಾದ್ರು ತಂಡದ ಆಟ ಎಂದು ಕರೆಯತ್ತಾರಾ ಎಂದು ಟ್ವಿಟ್ ಮಾಡಿದ್ದಾರೆ. ಕೆಕೆಆರ್​ ಆಡಿದ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಿಲ್​ ಕ್ಲಾಸ್ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ರು. ಹೀಗಾಗಿ ಒಬ್ಬ ಕ್ರಿಕೆಟ್​ ಫ್ಯಾನ್​ ಆಗಿ ನಾನು ಮುಂದಿನ ಪಂದ್ಯದಲ್ಲಿ, ಗಿಲ್​ ಟಾಪ್​ ಆರ್ಡರ್​ನಲ್ಲಿ ಆಡಬಹುದು ಎಂದು ನಿರೀಕ್ಷಿಸಿದ್ದೆ ಎಂದು ತಿವಾರಿ ಬರೆದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಈವರೆಗು 8 ಏಕದಿನ, 3 ಟಿ20 ಪಂದ್ಯವಾಡಿರುವ ತಿವಾರಿ, ಕಳೆದ ಐಪಿಎಲ್​ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಆಡಿದ್ರು. ಆದ್ರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ತಿವಾರಿ ಅವರನ್ನ ಖರೀದಿಸಿಲ್ಲ.