ಬೇರೆಯವರಿಗೊಂದು ನ್ಯಾಯ, ಧೋನಿಗೊಂದು ನ್ಯಾಯನಾ..?

ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದ ವೇಳೆ ಸಿಎಸ್​ಕೆ ಕ್ಯಾಪ್ಟನ್​ ಧೋನಿ ತೋರಿದ ವರ್ತನೆ ಸದ್ಯ ಕ್ರಿಕೆಟ್​ ಲೋಕದಲ್ಲಿ ಹಾಟ್​ ಟಾಪಿಕ್ ಆಗಿದೆ. ಕೆಲವರು ಧೋನಿ ಬೆಂಬಲಕ್ಕೆ ನಿಂತಿದ್ದಾರೆ.ಇನ್ನು ಕೆಲವರು ಕೂಲ್ ಕ್ಯಾಪ್ಟನ್​ ಎಂದೇ ಕರೆಸಿಕೊಳ್ಳೋ ಧೋನಿ, ಹೀಗೆಲ್ಲಾ ರೂಲ್ಸ್ ಬ್ರೇಕ್​ ಮಾಡಿದ್ರೆ ಹೇಗೆ ಎಂದು ಕಿಡಿಕಾರುತ್ತಿದ್ದಾರೆ.ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಸಹ ಧೋನಿ ವರ್ತನೆಯನ್ನ ಖಂಡಿಸಿದ್ದಾರೆ.ದೊಡ್ಡ ಶಿಕ್ಷೆಯಿಂದ ಧೋನಿಯನ್ನ ಪಾರು ಮಾಡಲಾಗಿದೆ.ಧೋನಿಯಂತೆ ಮುಂದೆ ಇತರೆ ನಾಯಕರು ಅಂಪೈರ್​ ತೀರ್ಪಿನ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇದೆ.ಒಂದು ವೇಳೆ ಹಾಗೇನಾದರೂ ಆದರೆ,ಅಂಪೈರ್‌ಗಳ ತೀರ್ಪಿಗೆ ಬೆಲೆ ಇಲ್ಲದಂತಾಗುತ್ತದೆ.ಧೋನಿಗೆ ಶಿಕ್ಷೆ ವಿಧಿಸಿದ್ದರೆ ಉಳಿದ ಆಟಗಾರರಿಗೆ ಎಚ್ಚರಿಕೆಯಾಗುತ್ತಿತ್ತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.ಮತ್ತೊಂದೆಡೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಧೋನಿ ಪರವಾಗಿ ಮಾತನಾಡಿದ್ದಾರೆ.ಧೋನಿ ಕೂಡ ಮನುಷ್ಯ,ಪಂದ್ಯದ ನಿರ್ಣಾಯಕ ಹಂತದಲ್ಲಿ ಅಂಪೈರ್​ ತಪ್ಪಾಗಿ ತೀರ್ಪು ನೀಡಿದ್ರೆ ಯಾರಿಗಾದ್ರೂ ಕೋಪ ಬರುತ್ತೆ. ಹೀಗಾಗಿ ಧೋನಿ ಆ ರೀತಿ ವರ್ತಿಸಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್​ನ 19.4ನೇ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ ಎಸೆದ ಸ್ಲೋ ಫುಲ್​ ಟಾಸ್ ಚೆಂಡನ್ನ, ಸ್ಟ್ರೇಟ್​ ಅಂಪೈರ್ ಉಲ್ಲಾಸ್ ಗಾಂಧಿ ನೋ ಬಾಲ್ ಅಂತ ಘೋಷಿಸಿದ್ರು.ಆದ್ರೆ ಸ್ಕೇರ್​ ಲೆಗ್​ನಲ್ಲಿ ಇದ್ದ ಮತ್ತೊರ್ವ ಅಂಪೈರ್​ ಬ್ರೂಸ್ ಆಕ್ಸನ್​ಫೋರ್ಡ್, ಅದು​ ನೋ ಬಾಲ್ ಅಲ್ಲ ಲೀಗಲ್ ಡಿಲಿವರಿ ಅಂತ ಸಿಗ್ನಲ್ ನೀಡಿದ್ರು. ಅಂಪೈರ್​ಗಳ ತೀರ್ಮಾನದಿಂದ ಕೋಪಗೊಂಡ ಧೋನಿ, ಡಗೌಟ್​ನಿಂದ ಸೀದಾ ಫೀಲ್ಡ್​ಗೆ ಆಗಮಿಸಿದ್ರು. ಕೆಲ ಕಾಲ ಮಾಹಿ ಅಂಪೈರ್​ಗಳ ವಿರುದ್ಧ ವಾಗ್ವಾದ ನಡೆಸಿದ್ರು. ನಂತರ ಬೆನ್ ಸ್ಟೋಕ್ಸ್​ ಮತ್ತಿತರೆ ಆಟಗಾರರು, ಧೋನಿಯನ್ನ ಕೂಲ್ ಮಾಡಿ ಕಳುಹಿಸಿದ್ರು. ಐಸಿಸಿ ಲೆವೆಲ್ 2 ನಿಯಮ ಉಲ್ಲಂಘಿಸಿದ ಚೆನ್ನೈ ಸೂಪರ್​ಕಿಂಗ್ಸ್​ ನಾಯಕ ಎಂ.ಎಸ್.ಧೋನಿಗೆ ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಶೇಕಡ 50ರಷ್ಟು ದಂಡು ವಿಧಿಸಿದ್ರು.